ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿವೀರ್ ನೇಮಕಾತಿ ರ್ಯಾಲಿಯಲ್ಲಿ ವಿಫಲವಾದ ಕ್ಷುಲ್ಲಕ ಕಾರಣಕ್ಕೆ ಮನನೊಂದ ಉತ್ತರಾಖಂಡದ ಅಭ್ಯರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತನನ್ನು ಗುಡ್ಡಗಾಡು ರಾಜ್ಯದ ಪೌರಿ ಗರ್ವಾಲ್ ಜಿಲ್ಲೆಯ ನೌಗಾಂವ್ ಕಮಂದ ಗ್ರಾಮದ ನಿವಾಸಿ ಸುಮಿತ್ ಕುಮಾರ್(23) ಎಂದು ಗುರುತಿಸಲಾಗಿದೆ. ಆತ ಅಗ್ನಿವೀರ್ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕೋಟ್‌ದ್ವಾರಕ್ಕೆ ತೆರಳಿದ್ದ. ಆದರೆ ನೇಮಕಾತಿ ರ್ಯಾಲಿಯನ್ನು ಪರರಿಪೂರ್ಣಗೊಳಿಸಲು ವಿಫಲನಾಗಿದ್ದ. ಆತನ ವಯಸ್ಸಿನ ಮಿತಿ ಮೀರುವುದರಿಂದ ಮುಂದಿನ ವರ್ಷ ಭಾಗವಹಿಸಲು ಆತನಿಗೆ ಅವಕಾಶವಿಲ್ಲದ ಕಾರಣ ಇದು ಅವನ ಕೊನೆಯ ಅವಕಾಶವಾಗಿತ್ತು.
ಆಯ್ಕೆಯಲ್ಲಿ ವಿಫಲವಾಗಿರುವುದಕ್ಕೆ ಮನನೊಂದ ಆತ ತನ್ನ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಳೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.