Friday, September 30, 2022

Latest Posts

ಈ ಸ್ಲೈಡ್ಸ್‌ ಮೇಲೆ ಜಾರಿದರೆ ಸೊಂಟ ಮುರಿಯುವುದು ಗ್ಯಾರೆಂಟಿ: ಆದರೂ ಎಂಜಾಯ್‌ ಮಾಡ್ತಿರುವ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿನ ಸ್ಲೈಡ್‌ಗಳು ಸಾಕಷ್ಟು ಥ್ರಿಲ್ ನೀಡುತ್ತವೆ. ವಿಶೇಷವಾಗಿ ಸಾಹಸ ಚಟುವಟಿಕೆಗಳನ್ನು ಇಷ್ಟಪಡುವವರಿಗೆ ಬೇಕಂತಲೇ ಇವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಎಷ್ಟೇ ಎತ್ತರದಿಂದ ಜಾರಿದರೂ ಯಾವುದೇ ಅಪಾಯವಾಗದಂತೆ ನಿರ್ವಾಹಕರು ಸಾಕಷ್ಟು ಮುಂಜಾಗ್ರತೆ ವಹಿಸುತ್ತಾರೆ. ಆದರೆ, ಅಮೇರಿಕಾದಲ್ಲಿನ ದೈತ್ಯ ಸ್ಲೈಡ್ ಇವುಗಳಿಗಿಂತ ವಿಭಿನ್ನವಾಗಿದೆ, ಸಿಕ್ಕಾಪಟ್ಟೆ ಏರಿಳಿತಗಳು ಇದಲ್ಲದೆ ಇದು ಸಂಪೂರ್ಣವಾಗಿ ಕಬ್ಬಿಣದಿಂದ ಮಾಡಲ್ಪಟ್ಟಿದೆ. ನೀವು ಅದರ ಮೇಲೆ ಜಾರಿದರೆ, ನಿಮ್ಮ ದೇಹದಲ್ಲಿರುವ ಅಂಗಗಳು ಮುರಿದು ಗಾಯಗೊಳ್ಳುವುದು ಖಚಿತ. ಈ ಸ್ಲೈಡ್ ಮಿಚಿಗನ್ ರಾಜ್ಯದ ಬೆಲ್ಲೆ ಐಲ್ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ. ಈಗ ವೀಡಿಯೋ 11 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಈ ಅಪಾಯಕಾರಿ ಸ್ಲೈಡ್‌ನಲ್ಲಿ ಅವರೆಲ್ಲ ಹೇಗೆ ಜಾರುತ್ತಿದ್ದಾರೆ ಎಂದು ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!