ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಟಿಕೆಟ್ ಸಿಗದಿದ್ದಕ್ಕೆ ಕೋಪಗೊಂಡು ಐದು ಮಂದಿ ಅಮ್ಮ್ ಆದ್ಮಿ ಪಾರ್ಟಿ ಶಾಸಕರು ರಾಜೀನಾಮೆ ನೀಡಿದ್ದಾರೆ.
ತ್ರಿಲೋಕಪುರಿ ಕ್ಷೇತ್ರದ ಶಾಸಕ ರೋಹಿತ್ ಮೆಹ್ರಾಲಿಯಾ, ಜನಕಪುರಿ ಶಾಸಕ ರಾಜೇಶ್ ರಿಷಿ, ಕಸ್ತೂರಬಾ ನಗರ ಶಾಸಕ ಮದನ್ ಲಾಲ್, ಪಾಲಂ ಶಾಸಕಿ ಭಾವನಾ ಗೌರ್, ಮೆಹ್ರೌಲಿ ಶಾಸಕ ನರೇಶ್ ಯಾದವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಪಾಲಂ ಶಾಸಕಿ ಭಾವನಾ ಗೌರ್ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ’ಕೇಜ್ರಿವಾಲ್ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ’ ತಿಳಿಸಿದ್ದಾರೆ.