ಸ್ಪೈಸ್ ಜೆಟ್ ವಿಮಾನಕ್ಕೆ ಹುಸಿ ಬಾಂಬ್ ಕರೆ: ಬ್ರಿಟಿಷ್ ಏರ್ವೇಸ್ ಟ್ರೈನಿ ಟಿಕೆಟಿಂಗ್ ಏಜೆಂಟ್‌ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪುಣೆಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನಕ್ಕೆ ಬಾಂಬ್ ಕರೆ ಮಾಡಿದ್ದಕ್ಕಾಗಿ ಬ್ರಿಟಿಷ್ ಏರ್‌ವೇಸ್‌ನ ಟ್ರೈನಿ ಟಿಕೆಟಿಂಗ್ ಏಜೆಂಟ್‌ನನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗುರುವಾರ ದೆಹಲಿಯ ಐಜಿಐ ಏರ್‌ಪೋರ್ಟ್‌ನಲ್ಲಿರುವ ಸ್ಪೈಸ್‌ಜೆಟ್ ಕಾಲ್ ಸೆಂಟರ್‌ಗೆ ನಕಲಿ ಬಾಂಬ್ ಕರೆ ಮಾಡಿದ್ದನು.

ಭದ್ರತಾ ಅಧಿಕಾರಿಗಳು ಪರಿಶೀಲಿಸಿದಾಗ ಅನುಮಾನಾಸ್ಪದವಾಗಿ ಏನನ್ನೂ ಕಂಡುಹಿಡಿಯಲಿಲ್ಲ. ನಂತರ ಈ ಕರೆಯನ್ನು ಹುಸಿ ಎಂದು ಘೋಷಿಸಲಾಯಿತು ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.

ಐಜಿಐ ವಿಮಾನ ನಿಲ್ದಾಣದ ಡಿಸಿಪಿ ರವಿಕುಮಾರ್ ಸಿಂಗ್ ಅವರ ಪ್ರಕಾರ, ತನಿಖೆಯ ಸಮಯದಲ್ಲಿ ಆರೋಪಿಯು ಅವನ ಸ್ನೇಹಿತರಾದ ರಾಕೇಶ್ ಮತ್ತು ಕುನಾಲ್ ಮನಾಲಿಗೆ ರಸ್ತೆ ಪ್ರವಾಸಕ್ಕೆ ಹೋಗಿದ್ದರು ಮತ್ತು ಇಬ್ಬರು ಹುಡುಗಿಯರೊಂದಿಗೆ ಸ್ನೇಹ ಬೆಳೆಸಿದರು. ಇಬ್ಬರು ಹುಡುಗಿಯರು ಸ್ಪೈಸ್ ಜೆಟ್ ವಿಮಾನದ ಮೂಲಕ ಪುಣೆಗೆ ಹೊರಟಿದ್ದರು.  ದೆಹಲಿಯಿಂದ ಹೊರಡುವುದನ್ನು ಹೇಗಾದರೂ ತಡೆಯಲು ಈ ರೀತಿ ಮಾಡಿದ್ದಾನೆ ಎಂದು ಹೇಳಿದರು.

ಆತ ಹಾಗು ಸ್ನೇಹಿತರು ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ಕಾಲ್ ಸೆಂಟರ್‌ನಲ್ಲಿ ಹಾರಾಟವನ್ನು ರದ್ದುಗೊಳಿಸುವ ಉದ್ದೇಶದಿಂದ ಸುಳ್ಳು ಬಾಂಬ್ ಕರೆ ಮಾಡುವ ದುರುದ್ದೇಶಪೂರಿತ ಯೋಜನೆಯನ್ನು ರೂಪಿಸಿದರುಎಂದು ಅವರು ಹೇಳಿದರು. ಸದ್ಯ ಕುನಾಲ್ ಮತ್ತು ರಾಕೇಶ್ ತಲೆಮರೆಸಿಕೊಂಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!