ರಾಜ್ಯಪಾಲರ ಹೆಸರಿನಲ್ಲಿ ಫೇಕ್ ಫೇಸ್‌ಬುಕ್ ಪ್ರೊಫೈಲ್: ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಫೇಕ್ ಅಕೌಂಟ್‌ನ್ನು ಓಪನ್ ಮಾಡಲಾಗಿದೆ. ಗೆಹ್ಲೋಟ್ ಅವರ ಫೋಟೊ, ಹೆಸರು ಬಳಸಿ ಖಾತೆ ಸೃಷ್ಟಿ ಮಾಡಿದ್ದು, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈವರೆಗೂ ಪ್ರೊಫೈಲ್ ಓಪನ್ ಮಾಡಿದ ವ್ಯಕ್ತಿ ಯಾರು ಎಂದು ತಿಳಿದುಬಂದಿಲ್ಲ. ರಾಜ್ಯಪಾಲರ ಹೆಸರಿನಲ್ಲಿ ಫೇಕ್ ಖಾತೆ ಆಗಿದೆ, ಈ ರೀತಿ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ದೂರು ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!