ಕ್ರಿಕೇಟಿಗ ಅರ್ಷದೀಪ್‌ ಸಿಂಗ್‌ ವಿಕಿಪೀಡಿಯಾ ಪುಟದಲ್ಲಿ ನಕಲಿ ಮಾಹಿತಿ: ಕೇಂದ್ರದಿಂದ ಸಮನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿನ್ನೆ ನಡೆದ ಏಷ್ಯಾಕಪ್‌ ಟೂರ್ನಿಯ ಭಾರತ ಪಾಕಿಸ್ತಾನ ಪಂದ್ಯದಲ್ಲಿ ಭಾರತವು ಸೋಲುಂಡ ಬೆನ್ನಲ್ಲೇ ಕ್ರಿಕೇಟಿಗ ಅರ್ಷದೀಪ್‌ ಸಿಂಗ್‌ ಅವರ ವಿಕಿಪೀಡಿಯಾ ಪುಟದ ಎಂಟ್ರಿಯಲ್ಲಿ ನಕಲಿ ಮಾಹಿತಿಯನ್ನು ನೀಡಿದ್ದಕ್ಕಾಗಿ ಭಾರತದ ವಿಕಿಪೀಡಿಯಾ ಕಾರ್ಯನಿರ್ವಾಹಕರಿಗೆ ಸಮನ್ಸ್‌ ನೀಡಿದ್ದು ಈ ಕುರಿತು ವಿವರಣೆಯನ್ನು ಕೇಳಿದೆ.

ಭಾನುವಾರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಐದು ವಿಕೆಟ್‌ಗಳ ಸೋಲಿನ ನಂತರ ಪಂದ್ಯದಲ್ಲಿ ಕ್ಯಾಚ್ ಕೈಬಿಟ್ಟಿದ್ದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಭಾರತದ ಸೋಲಿನ ನಂತರ ಟೀಕೆಗೆ ಗುರಿಯಾಗಿದ್ದರು. ಇದನ್ನು ಅನುಸರಿಸಿ, ವಿಕಿಪೀಡಿಯಾ ಪುಟದ ನಮೂದುಗಳು ಸಿಂಗ್ ಅವರನ್ನು “ಖಾಲಿಸ್ತಾನಿ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಡಲು ಆಯ್ಕೆ ಮಾಡಲಾಗಿದೆ” ಎಂದು ಬರೆದಿದ್ದವು ಎನ್ನಲಾಗಿದೆ. ಮಾಹಿತಿ ಪಸರಿಸುತ್ತಿದ್ದಂತೆ ಈ ಪುಟವನ್ನು ಮರುಸ್ಥಾಪಿಸಲಾಗಿದೆ.

ಈ ಕುರಿತು ಕೇಂದ್ರವು ಸಮನ್ಸ್‌ ನೀಡಿದ್ದು ವಿಕಿಪೀಡಿಯಾ ನಿರ್ವಾಹಕರಿಂದ ವಿವರಣೆ ಕೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!