ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಪೈಲಟ್‌ನ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಪೈಲಟ್ ನನ್ನು ಬಂಧಿಸಲಾಗಿದೆ. ಈ ವ್ಯಕ್ತಿಯನ್ನು ಸಂಗೀತ್ ಸಿಂಗ್ ಎಂದು ಗುರುತಿಸಲಾಗಿದೆ, ಪೈಲಟ್ ಸಮವಸ್ತ್ರವನ್ನು ಧರಿಸಿ, ಸಿಂಗಾಪುರ್ ಏರ್‌ಲೈನ್ಸ್ ಪೈಲಟ್ ಎಂದು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಅಧಿಕಾರಿಗಳಿಗೆ ತಿಳಿಸಿದ್ದ.

ಕೊರಳಲ್ಲಿ ಗುರುತಿನ ಚೀಟಿಯನ್ನೂ ಹಾಕಿಕೊಂಡಿದ್ದ. ಆದರೆ ಸಿಐಎಸ್‌ಎಫ್ ಸಿಬ್ಬಂದಿಗೆ ಆ ವ್ಯಕ್ತಿಯ ಮೇಲೆ ಅನುಮಾನ ಬಂದಿದ್ದು, ವಿಚಾರಣೆ ನಡೆಸಿದಾಗ ಆತ ಪೈಲಟ್ ಅಲ್ಲ ಎಂಬುದು ತಿಳಿದುಬಂದಿದೆ. ನಂತರ ಸಿಐಎಸ್‌ಎಫ್ ನಕಲಿ ಪೈಲಟ್‌ನನ್ನು ಬಂಧಿಸಿ ದೆಹಲಿ ಪೊಲೀಸರಿಗೆ ಒಪ್ಪಿಸಿತ್ತು.

ವರದಿ ಪ್ರಕಾರ, ಏಪ್ರಿಲ್ 25 ರಂದು ಈ ಘಟನೆ ನಡೆದಿದೆ. ಮೆಟ್ರೋ ಸ್ಕೈವಾಕ್ ಪ್ರದೇಶದಲ್ಲಿ ಪೈಲಟ್ ವೇಷಧರಿಸಿ ಅಡ್ಡಾಡುತ್ತಿದ್ದ ವ್ಯಕ್ತಿಯನ್ನು ಸಿಐಎಸ್ಎಫ್ ಸಿಬ್ಬಂದಿ ಗಮನಿಸಿದ್ದಾರೆ. ಈ ವ್ಯಕ್ತಿ ತಾನು ಏರ್‌ಲೈನ್ ಪೈಲಟ್ ಎಂದು ಹೇಳಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!