Wednesday, March 29, 2023

Latest Posts

ಚಂದಾದಾರರ ಸಂಖ್ಯೆಯಲ್ಲಿ ಕುಸಿತ: 7000 ಉದ್ಯೋಗಿಗಳನ್ನು ಹೊರಹಾಕಿದ ಡಿಸ್ನೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ದೈತ್ಯ ಕಂಪನಿಗಳಲ್ಲಿ ಉದ್ಯೋಗ ಕಡಿತದ ಪರ್ವ ಮುಂದುವರೆದಿದ್ದು ಇದೀಗ ಮನರಂಜನಾ ಕ್ಷೇತ್ರದ ದಿಗ್ಗಜ ಕಂಪನಿ ಡಿಸ್ನೀ ತನ್ನ 7 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಹೇಳಿದೆ. ಈ ಕುರಿತು ಕಂಪನಿಯ ಸಿಇಒ ಬಾಬ್ ಇಗರ್ ಸ್ಪಷ್ಟಪಡಿಸಿದ್ದು ಚಂದಾದಾರರ ಸಂಖ್ಯೆಯಲ್ಲಿ ಗಣನೀಯ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ ಹೀಗಾಗಿ ತುಸು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಅದರ 2021 ರ ವಾರ್ಷಿಕ ವರದಿಯ ಪ್ರಕಾರ, ಡಿಸ್ನಿಯು ವಿಶ್ವಾದ್ಯಂತ 1,90,000 ಜನರನ್ನು ನೇಮಿಸಿಕೊಂಡಿದೆ, ಅವರಲ್ಲಿ 80 ಪ್ರತಿಶತ ಪೂರ್ಣ ಸಮಯದ ಕೆಲಸಗಾರರಾಗಿದ್ದಾರೆ.

ವಾಲ್ಟ್ ಡಿಸ್ನಿ ಸ್ಥಾಪಿಸಿದ ಕಂಪನಿಯು ತನ್ನ ಸ್ಟ್ರೀಮಿಂಗ್ ಸೇವೆಯು ಕಳೆದ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಚಂದಾದಾರರ ಕುಸಿತವನ್ನು ಕಂಡಿದೆ ಎಂದು ಹೇಳಿದೆ. ಡಿಸೆಂಬರ್ 31 ರಂದು 161.8 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು ಶೇಕಡಾ ಒಂದರಷ್ಟು ಕುಸಿದಿದೆ. ಹೀಗಾಗಿ ತನ್ನ ಆರ್ಥಿಕತೆ ಸುಧಾರಿಸಿ ಲಾಭದಾಯಕತೆ ಹೆಚ್ಚಿಸಲು ಡಿಸ್ನೀ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!