VIRAL VIDEO| ನೋಡ ನೋಡುತ್ತಿದ್ದಂತೆ ಜನರ ಮೇಲೆ ಬಿದ್ದ ಪೈನ್‌ ಮರಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವೊಮ್ಮೆ ಅಪಘಾತಗಳು ಹೇಗೆ, ಎಲ್ಲಿಂದ, ಯಾಕೆ ಸಂಭವಿಸುತ್ತವೆ ಎಂದು ಊಹಿಸುವ ಮೊದಲೇ ನಡೆದುಹೋಗಿರುತ್ತವೆ. ಏನಾಗುತ್ತಿದೆ ಎಂದು ತಿಳಿಯುವುದಕ್ಕೂ ಸಮಯವಿರುವುದಿಲ್ಲ ಅಷ್ಟರಲ್ಲಾಗಲೇ ನಡೆದುಹೋಗಬಹುದಾದ ಅನಾಹುತ ನಡೆದಿರುತ್ತದೆ. ಇದೀಗ ಗಾಲ್ಫ್ ಪಂದ್ಯಾವಳಿ ವೇಳೆ ಪೈನ್ ಮರಗಳು ಬಿದ್ದ ಘಟನೆ ಆಘಾತಕಾರಿಯಾಗಿದೆ.

2023ರ ಮಾಸ್ಟರ್ಸ್ ಟೂರ್ನಮೆಂಟ್ ಆಗಸ್ಟಾ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ನಡೆಯುತ್ತಿದೆ. ಗಾಲ್ಫ್ ಅಭಿಮಾನಿಗಳು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದ್ದ ವೇಳೆ ಕುಳಿತುಕೊಳ್ಳುವ ಜಾಗದಲ್ಲಿ ಮೂರು ಪೈನ್ ಮರಗಳು ಇದ್ದಕ್ಕಿದ್ದಂತೆ ನೆಲಕ್ಕುರುಳಿವೆ. ಅದೃಷ್ಟವಶಾತ್ ಅಲ್ಲಿದ್ದವರೆಲ್ಲರೂ ಅಪಘಾತದಿಂದ ಪಾರಾಗಿದ್ದಾರೆ. ತಕ್ಷಣವೇ ಪಂದ್ಯಾವಳಿಯನ್ನು ಮುಂದೂಡಲಾಯಿತು.

ಆಗಸ್ಟಾ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಮೂರು ಪೈನ್ ಮರಗಳು ನೇರವಾಗಿ ಕುಳಿತುಕೊಳ್ಳುವ ಪ್ರದೇಶಕ್ಕೆ ಬಿದ್ದವು. ಇದು ಪ್ರೇಕ್ಷಕರಲ್ಲಿ ಗೊಂದಲ ಮತ್ತು ಗಾಬರಿಯನ್ನು ಉಂಟುಮಾಡಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪಂದ್ಯಾವಳಿಯ ಸಂಘಟಕರು ತ್ವರಿತ ಕ್ರಮ ಕೈಗೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!