ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹೇಂದ್ರ ಸಿಂಗ್ ಧೋನಿ ಸಿನಿಮಾ ಕ್ಷೇತ್ರದಲ್ಲಿಯೂ ಹೆಜ್ಜೆಯಿಟ್ಟಿದ್ದಾರೆ. ಧೋನಿ ನಿರ್ಮಾಣದ ಮೊದಲ ಸಿನಿಮಾ ಲೆಟ್ಸ್ ಗೆಟ್ ಮ್ಯಾರೀಡ್‌ನ ಫಸ್ಟ್ ಲುಕ್ ರಿಲೀಸ್ ಆಗಿದೆ.
ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಇದಾಗಿದ್ದು,ಫ್ಯಾಮಿಲಿ ಆಡಿಯನ್ಸ್‌ನ್ನು ಧೋನಿ ಟಾರ್ಗೆಟ್ ಮಾಡಿದ್ದಾರೆ. ಎಲ್‌ಜಿಎಂ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ, ಇಡೀ ತಂಡಕ್ಕೆ ಆಲ್ ದಿ ಬೆಸ್ಟ್, ಫ್ಯಾಮಿಲಿ ಆಡಿಯನ್ಸ್‌ಗೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ ಎಂದು ಧೋನಿ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವ ವಹಿಸಿದ ಮೇಲೆ ಧೋನಿ ತಮಿಳು ಸಿನಿರಂಗದಲ್ಲಿ ಆಸಕ್ತಿ ವಹಿಸಿದ್ದಾರೆ. ಹಾಗಾಗಿ ತಮಿಳಿನಲ್ಲೇ ತಮ್ಮ ಮೊದಲ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ.