ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯಾ ಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತನ್ನ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪರಿಣಾಮ ನಾಲ್ವರು ಪುಟ್ಟ ಮಕ್ಕಳು ಸಾವಿಗೀಡಾದ ದಾರುಣ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಮಂಗಳಿಯವಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬಳಿಕ ಸಂಪೂರ್ಣ ವಿವರ ನೀಡಿದ್ದಾರೆ. ಕೌಟುಂಬಿಕ ಕಲಹದಿಂದ ಮತಿಯಾ (32) ಎಂಬ ಮಹಿಳೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ರಾತ್ರಿ ತನ್ನ ಮಕ್ಕಳಾದ ಕೋಮಲ್ (4), ರಿಂಕು (3), ರಾಜ್ ವೀರ್ (22 ತಿಂಗಳು) ಮತ್ತು ದೇವ ರಾಜ್ (ಒಂದು ತಿಂಗಳು)ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿದ ಬಳಿಕ ಆಕೆಯೂ ಬಾವಿಗೆ ಹಾರಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಬಾವಿಯಿಂದ ಎಲ್ಲರನ್ನು ಹೊರತರಲು ಯತ್ನಿಸಿದರು. ಆದರೆ ದುರಾದೃಷ್ಟವಶಾತ್‌ ನಾಲ್ವರು ಮಕ್ಕಳು ಜೀವಂತಾಗಿ ಬರಲೇ ಇಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!