February 4, 2026
Wednesday, February 4, 2026
spot_img

ಕೌಟುಂಬಿಕ ಕಲಹ? ಬಾಡಿಗೆ ಮನೆಯಲ್ಲಿ ಯುವಕ ಆತ್ಮಹತ್ಯೆ

ಹೊಸದಿಗಂತ ವರದಿ ಸಿಂಧನೂರು:

ಬಾಡಿಗೆ ಮನೆವೊಂದರಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ನಡೆದಿದೆ.

ಪಟ್ಟಣದ ಮಹೆಬೂಬ್ ಕಾಲೋನಿಯಲ್ಲಿನ ಮನೆಯಲ್ಲಿ ಏಳುರಾಗಿ ಕ್ಯಾಂಪಿನ ನಿವಾಸಿ ದಾವಲ್ ಸಾಬ್(೨೫) ನೇಣಿಗೆ ಶರಣಾದ ವ್ಯಕ್ತಿ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದನು ಎನ್ನಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಂಧನೂರು ನಗರ ಠಾಣೆ ಪೊಲೀಸರಿಂದ ತಪಾಸಣೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ,ಡಿವೈಎಸ್ಪಿ ಭೇಟಿ ನೀಡಿ ಅಽಕಾರಿಗಳಿಂದ ಮಾಹಿತಿ ಪಡೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !