ಕುಟುಂಬ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಬಾರದು : ಎಸ್.ಆರ್.ಪಾಟೀಲ

ಹೊಸದಿಗಂತ ವರದಿ ಬಾಗಲಕೋಟೆ :

ರಾಜಕೀಯದಲ್ಲಿ ಕುಟುಂಬ ರಾಜಕಾರಣ ಮಾಡುವುದು ಸೂಕ್ತವಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್‌.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರಯ.
ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಕುಟಬ ರಾಜಕಾರಣ ಕ್ಕೆ ಯಾವುದೇ ಪಕ್ಷದವರಿರಲಿ ಪ್ರಾಶಸ್ತ್ಯ ನೀಡಬಾರದು.‌ ನಾವು ಶಾಸಕರಾದ ನಂತರ ನಮ್ಮ ಮಕ್ಕಳು ಶಾಸಕರಸಗಬೇಕು, ಮಂತ್ರಿ ಆಗಬೇಕು ಎಂಬುದು ತಪ್ಪು ಎಂದು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ಎಲ್ಲ ಪಕ್ಷದ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಬೇಕು. ಸಾಕಷ್ಟು ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಾರೆ.ಅಂತಹ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಎಲ್ಲ ರಾಜಕೀಯ ನಾಯಕರಿಗೆ ಹೇಳಿದರು.

ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್,ಮಹಿಳೆಯರಿಗೆ ೨೦೦೦ ರೂ. ಪ್ರೋತ್ಸಾಹ ಹಣವನ್ನು ನೀಡಲಿದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ರಾಜಕಾರಣದಲ್ಲಿ ಪ್ರಾಮಾಣಿಕತೆ,‌ನಿಷ್ಠೆ , ಬದ್ದತೆಯಿಂದ‌ ಮಾಡುವ ಕೆಲಸ ಮತ್ತೊಬ್ಬರಿಗೆ ಅನುಕರಣೆ ಆಗುವಂತಿರಬೇಕು.ನಮ್ಮನ್ನು‌ಸಮಾಜ,‌ಮಕ್ಕಳು ನೋಡುತ್ತಿರುತ್ತಾರೆ ಹೀಗಾಗಿ ರಾಜಕಾರಣಿ ರೋಲ್ ಮಾಡಲ್ ಆಗಬೇಕು ಎಂದರು.

ಬ್ಯ್ಲಾಕ್ ಮೇಲ್‌ಹಾಗೂ ಸಿಡಿ ಇಟ್ಟು ಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ಇದು ಎಲ್ಲ ಕ್ಷೇತ್ರದಲ್ಲಿ ನಡೆಯುತ್ತಿದೆ. ಇಂತಹ ಬ್ಲ್ಯಾಕ್ ಮೇಲ್ ರಾಜಕಾರಣಕ್ಕೆ ಬಗ್ಗಬಾರದು. ಪ್ರಾಮಾಣಿಕರು ಅಪ್ರಮಾಣಿಕರು ಆಗಬಾರದು ಎಂದರು.

ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ‌ ಇಚ್ಚೆಯನ್ನು ಹೊಂದಿದ್ದೇನೆ. ಪಕ್ಷದ ವರಿಷ್ಠರು ಯಾವ ಕ್ಷೇತ್ರದಲ್ಲಿ ನಿಲ್ಲಲು ಹೇಳುತ್ತಾರೆ ಅಲ್ಲಿ ಸ್ಪರ್ಧೆ ಮಾಡುವೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ದ. ನಾನು ಅರ್ಜಿ ಸಲ್ಲಿಸುವಾಗ ಯಾವ ಕ್ಷೇತ್ರದಲ್ಲಿ ಎಂದು ಮೆನಶನ್ ಮಾಡಿಲ್ಲ ಎಂದರು.
ಉತ್ತರ ಕರ್ನಾಟಕದ ಲ್ಲಿ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂಬುದು ನನ್ನ ಬದ್ದತೆ ಇದೆ ಎಂದರು.

ಬಾಗಲಕೋಟೆ ಜಿಲ್ಲಾ ಕೇಂದ್ರ‌ ಸಹಕಾರಿ ಬ್ಯಾಂಕಿನಲ್ಲಿ ಅವ್ಯವಹಾರ ನಡೆಯಬಾರದಿತ್ತು.ಒಬ್ಬ ಸಿಪಾಯಿ ಕೋಟ್ಯಾಂತರ ರೂಪಾಯಿ ಹಗರಣ ಮಾಡಿದ್ದು ಸರಿಯಾದ ಬೆಳವಣಿಗೆ ಅಲ್ಲ ಇದರಿಂದ ನನಗೆ ನೋವಾಗಿದೆ. ಮೊದಲ ಬ್ಯಾಂಕಿನ ಚೇರಮನ್ ಆಗಿರುವ ಬ್ಯಾಂಕಿನಲ್ಲಿ ಹಗರಣ ಆಗಿದ್ದು ನೋವು ತಂದಿದೆ. ಬ್ಯಾಂಕಿನ ಹಿರಿಯ ಅಧಿಕಾರಿಗಳು ಈ ಬಗ್ಗೆ‌ನಿಗಾ ಇಡಬೇಕಾಗಿದೆ ಎಂದರು. ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಧಲಂಭಜನ್ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!