ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ: ಬಿ.ಎಸ್.ಯಡಿಯೂರಪ್ಪ ಲೇವಡಿ

ಹೊಸದಿಗಂತ ವರದಿ ಕಲಬುರಗಿ:

ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷದ ಪರವಾದ ವಾತಾವರಣ ನಿರ್ಮಾಣವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಶಕ್ತಿಗೂ ರಾಜ್ಯದಲ್ಲಿ ಮತ್ತೋಮ್ಮೆ ಬಿಜೆಪಿ ಅಧಿಕಾರಕ್ಕೆ ಬರವುದನ್ನು ತಡೆಯಲು ಆಗುವುದಿಲ್ಲ. ಅನೇಕರು ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಕನ ಕನಸು ಕಾಣುತ್ತಾ ಓಡಾಟ ನಡೆಸಿದ್ದಾರೆ. ಆದರೆ, ಅದ್ಯಾವದೂ ಕಾಯ೯ರೂಪಕ್ಕೆ ಬರುವುದಿಲ್ಲ ಎಂದು ಹೇಳಿದರು.

ನಿಶ್ಚಿತವಾಗಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸಕಾ೯ರ ಅಧಿಕಾರಕ್ಕೆ ಬರಲಿದ್ದು,ಮೋದಿಯಂತಹ ಒಬ್ಬ ಪ್ರಧಾನಿ ದೇಶಕ್ಕೆ ಲಭಿಸಿದ್ದು,ನಮ್ಮ ಸೌಭಾಗ್ಯ ಎಂದು ನುಡಿದರು. ಇಂತಹ ಮಹಾನಾಯಕನ ನೇತೃತ್ವದಲ್ಲಿ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದರು. ರಾಜ್ಯದ ಉದ್ದಗಲಕ್ಕೂ ನಮ್ಮ ಪ್ರವಾಸ ಪ್ರಾರಂಭವಾಗಿದೆ. ಇಂದು ಶನಿವಾರ ವಿಜಯಪುರಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುತ್ತಿದ್ದಾರೆ. ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಮತ್ತೆ ಎರಡೂ ಮೂರು ಬಾರಿ ಕರ್ನಾಟಟಕ್ಕೆ ಬರಲಿದ್ದಾರೆ ಎಂದರು.

ಬಿಜೆಪಿ ಪಕ್ಷದಲ್ಲಿ ನಾಯಕತ್ವ ಕೊರತೆಯಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಎನನ್ನೂ ಸಹ ಮಾಡಿಲ್ಲ.ಎನ್ ಮಾಡಿದ್ದಾರೆ ಅನ್ನೋದು ಒಂದೆರಡು ಮೂರು ಮಾತು ಹೇಳಲಿ ನೋಡೋಣ, ನಾವು ಮಾಡಿರುವ ಕೆಲಸವನ್ನೆ ಜನ ಹಾಡಿ ಹೋಗಳುತ್ತಿದ್ದಾರೆ ಎಂದರು.

ಒಂದು ವೇಳೆ ಕಾಂಗ್ರೆಸ್ ಪಕ್ಷದ ನಾಯಕರು ಒಳ್ಳೆಯ ಕೆಲಸ ಮಾಡಿದ್ದರೆ, ಅಧಿಕಾರ ಯಾಕೆ ಕಳೆದುಕೊಂಡರು. ಹೀಗಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈ ರೀತಿ ಮಾತನಾಡುವುದು ಸರಿಯಲ. ವಿರೋಧ ಪಕ್ಷದ ಮುಖಂಡರಾಗಿ ಜವಾಬ್ದಾರಿಯುತವಾಗಿ ಮಾತನಾಡಲಿ ಎಂದರು.

ಪಕ್ಷದಲ್ಲಿ ನನ್ನನ್ನು ಯಾವುದೇ ರೀತಿಯಲ್ಲಿ ನಿಲ೯ಕ್ಷ್ಯ ಮಾಡುತ್ತಿಲ್ಲ. ಯಡಿಯೂರಪ್ಪನಿಗೆ ಕೊಡಬೇಕಾದ ಎಲ್ಲಾ ಗೌರವ ಮತ್ತು ಸ್ಥಾನಮಾನಗಳನ್ನು ಪಕ್ಷ ನೀಡಿದೆ. ರಾಜ್ಯ ಮಟ್ಟದಲ್ಲಿ, ಕೇಂದ್ರ ಮಟ್ಟದಲ್ಲಿ ನನಗೆ ತುಂಬಾ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದು, ನಾನು ತುಂಬಾ ಅಭಾರಿಯಾಗಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!