ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಜನಪ್ರಿಯ ಗಾಯಕ ವಿಶಾಲ್ ದದ್ಲಾನಿ ಅಪಘಾತಕ್ಕೀಡಾಗಿದ್ದಾರೆ. ಅಪಘಾತದ ಕಾರಣ ಪುಣೆಯಲ್ಲಿ ನಡೆಯಬೇಕಿದ್ದ ಮ್ಯೂಸಿಕ್ ಕಾನ್ಸರ್ಟ್ನ ಸಹ ಗಾಯಕ ರದ್ದುಗೊಳಿಸಿದ್ದಾರೆ.
ಅಪಘಾತದ ನಂತರ ಗಾಯಕ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶಾಲ್ ಅಪಘಾತದ ಸುದ್ದಿ ತಿಳಿದ ನಂತರ ಅಭಿಮಾನಿಗಳು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ವಿಶಾಲ್ ಸ್ವತಃ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡಿದ ನಂತರ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದರು.
‘ನನಗೆ ಒಂದು ಸಣ್ಣ ಅಪಘಾತ ಆಯ್ತು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ಶೀಘ್ರವೇ ಭೇಟಿ ಆಗೋಣ’ ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ವಿಶಾಲ್ ಅಪಘಾತ ಯಾವಾಗ, ಎಲ್ಲಿ ಮತ್ತು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಏನೂ ತಿಳಿದಿಲ್ಲ. ಇದಲ್ಲದೆ, ಅಪಘಾತದಿಂದಾಗಿ ರದ್ದಾದ ಕಾರ್ಯಕ್ರಮಗಳ ಮುಂದಿನ ದಿನಾಂಕವನ್ನು ಘೋಷಿಸಲಾಗಿಲ್ಲ.