ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಅಭಿನಯದ ಛಾವಾ ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ರಶ್ಮಿಕಾ ಪ್ರಮೋಷನ್ಸ್‌ನಲ್ಲಿ ತೊಡಗಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ಪ್ರಮೋಷನ್ಸ್ ನಡೆಸಿದ್ದು, ನಾನು ಹೈದರಾಬಾದ್‌ನವಳು ಎಂದು ರಶ್ಮಿಕಾ ಹೇಳಿದ್ದಾರೆ.
ಈ ಮಾತನ್ನು ರಶ್ಮಿಕಾ ಹೇಳಿದ್ದು ವಿಜಯ್ ಹಾಗೂ ರಶ್ಮಿಕಾ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಮದುವೆಗೂ ಮುನ್ನವೇ ಹೈದರಾಬಾದ್‌ನ್ನು ನನ್ನ ಊರು ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಹಲವರ ಕೋಪಕ್ಕೂ ಇದು ಕಾರಣವಾಗಿದ್ದು, ಕರ್ನಾಟಕವನ್ನು ರಶ್ಮಿಕಾ ಮರೆತಿದ್ದಾರೆ ಎಂದಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಜನರ ಮನಸ್ಸನ್ನು ಗೆಲ್ಲೋದಕ್ಕೆ ಯಾವ ಊರಿಗೆ ಪ್ರಮೋಷನ್‌ಗೆ ಹೋಗ್ತಾರೆ ಅಲ್ಲಿನ ಕನೆಕ್ಷನ್ ಬಗ್ಗೆ ಮಾತನಾಡ್ತಾರೆ. ಅದೇ ರೀತಿ ರಶ್ಮಿಕಾ ಹೇಳಿರಬಹುದು ಎನ್ನಲಾಗಿದೆ.