ಇನ್ಮುಂದೆ ಮಹಿಳೆಯರ ಬಗ್ಗೆ ನೆಗೆಟಿವ್‌ ಭವಿಷ್ಯ ಹೇಳೋದಿಲ್ಲ, sorry ಎಂದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸೆಲೆಬ್ರಿಟಿಗಳ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಇನ್ಮುಂದೆ ಮಹಿಳೆಯರ ಬಗ್ಗೆ ನೆಗೆಟಿವ್‌ ಭವಿಷ್ಯ ಹೇಳೋದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.

ತೆಲುಗು ನಟ ನಾಗಚೈತನ್ಯ ಹಾಗೂ ಬಾಲಿವುಡ್‌ ನಟಿ ಸೋಭಿತಾ ಧುಲಿಪಾಲ ನಿಶ್ಚಿತಾರ್ಥದ ನಂತರ ಸೋಭಿತಾ ಬಗ್ಗೆ ನೆಗೆಟಿವ್‌ ಕಮೆಂಟ್ಸ್‌ ಮಾಡಿ, ಈ ಮದುವೆ ಕೂಡ ನಿಲ್ಲೋದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗಳಿಂದ ಸಿಟ್ಟಿಗೆದ್ದಿದ್ದ ಸೋಭಿತಾ ಹಾಗೂ ನಾಗಚೈತನ್ಯ ವೇಣು ಸ್ವಾಮಿ ವಿರುದ್ಧ ದೂರು ನೀಡಿದ್ದರು. ಶೋಭಿತಾ ಬಗ್ಗೆ ಆಡಿರುವ ಮಾತುಗಳನ್ನು ಆಧರಿಸಿ ಮಹಿಳಾ ಆಯೋಗ ಸಹ ವೇಣು ಸ್ವಾಮಿಗೆ ನೊಟೀಸ್ ನೀಡಿತ್ತು. ಇದೀಗ ವೇಣು ಸ್ವಾಮಿ, ಮಹಿಳಾ ಆಯೋಗಕ್ಕೆ ಬೇಷರತ್ ಕ್ಷಮೆ ಯಾಚನೆ ಮಾಡಿದ್ದಾರೆ.

ಮಹಿಳಾ ಆಯೋಗದ ನೊಟೀಸ್​ಗೆ ವಿರುದ್ಧವಾಗಿ ಹೈಕೋರ್ಟ್​ನಲ್ಲಿ ವೇಣು ಸ್ವಾಮಿ ಅರ್ಜಿ ಸಹ ದಾಖಲಿಸಿದ್ದರು. ಆದರೆ ಅಲ್ಲಿಯೂ ಸಹ ವೇಣು ಸ್ವಾಮಿಗೆ ಹಿನ್ನಡೆ ಆಗಿದ್ದು, ಖಡ್ಡಾಯವಾಗಿ ಮಹಿಳಾ ಆಯೋಗದ ಮುಂದೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಹೈಕೋರ್ಟ್​ನಲ್ಲಿ ಹಿನ್ನಡೆ ಉಂಟಾದ ಬೆನ್ನಲ್ಲೆ ಮಹಿಳಾ ಆಯೋಗದ ಮುಂದೆ ಬೇಷರತ್ ಕ್ಷಮೆ ಯಾಚಿಸಿರುವ ವೇಣು ಸ್ವಾಮಿ ಇನ್ನು ಮುಂದೆ ಮಹಿಳೆಯರಿಗೆ ಅಗೌರವ ಆಗುವ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here