ಅಂಡಾಶಯ ಕ್ಯಾನ್ಸರ್​ಗೆ ಖ್ಯಾತ ಫ್ಯಾಷನ್ ಪ್ರಭಾವಿ ಸುರಭಿ ಜೈನ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಅಂಡಾಶಯ ಕ್ಯಾನ್ಸರ್‌ ನಿಂದ ಖ್ಯಾತ ಫ್ಯಾಷನ್ ಪ್ರಭಾವಿ ಸುರಭಿ ಜೈನ್ (30) ನಿಧನರಾಗಿದ್ದಾರೆ.

ಸುರಭಿ ದೀರ್ಘಕಾಲದಿಂದ ಅಂಡಾಶಯ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ತಿಂಗಳ ಹಿಂದೆ ಸುರಭಿ ಕ್ಯಾನ್ಸರ್‌ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಸಾಮಾಜೆಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

‘ನನ್ನ ಆರೋಗ್ಯದ ಬಗ್ಗೆ ನಿಮಗೆ ತಿಳಿಸಲು ಸಾಧ್ಯವಿಲ್ಲ. ಆರೋಗ್ಯ ಸ್ಥಿತಿ ತುಂಬಾ ಕೆಟ್ಟದಾಗಿದೆ. ಎಲ್ಲರೂ ಆರೋಗ್ಯದ ಬಗ್ಗೆ ಕೇಳುತ್ತಾರೆ. ಆದರೆ ಹೆಚ್ಚೇನೂ ಹೇಳಬೇಕಾಗಿಲ್ಲ. ಕಳೆದ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿಯೇ ಇದ್ದೇನೆ. ಚಿಕಿತ್ಸೆ ನಡೆಯುತ್ತಿದೆ. ಈ ಕಷ್ಟಗಳು ಆದಷ್ಟು ಬೇಗ ಮುಗಿಯಲಿ ಎಂದು ನಾನು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಇದೀಗ ಸುರಭಿ ಸಾವನ್ನಪ್ಪಿದ್ದು, ಈ ಬಗ್ಗೆ ಕುಟುಂಬಸ್ಥರೇ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ. ಆಕೆ ಏಪ್ರಿಲ್ 18 ರಂದು ನಿಧನರಾದರು.

ಸುರಭಿಗೆ 27ನೇ ವಯಸ್ಸಿನಲ್ಲಿ ಕ್ಯಾನ್ಸರ್​ ಇರುವುದು ಪತ್ತೆಯಾಗಿತ್ತು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತನಗೆ 149 ಹೊಲಿಗೆ ಹಾಕಲಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ತುಂಬಾ ನೋವಾಗಿದೆ ಎಂದು ಸುರಭಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!