ಹೊಸ ದಿಗಂತ ಡಿಜಿಟಲ್ ಡೆಸ್ಕ್
‘ಅನಾರೋಗ್ಯಕ್ಕೆ ಒಳಗಾಗಿದ್ದ ಖ್ಯಾತ ಗಾಯಕಿ ಕಲ್ಯಾಣಿ ಕಾಜಿ ಅವರು ಶುಕ್ರವಾರ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕಾಜಿ ಅನಿರುದ್ಧ ಅವರ ಪತ್ನಿ ಕಲ್ಯಾಣಿ ( 87 ) ಅವರು ಇಲ್ಲಿನ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಲ್ಯಾಣಿ ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಪ್ರಸ್ತುತ ಇವರೆಲ್ಲರೂ ಅಮೆರಿಕದಲ್ಲಿ ನೆಲೆಸಿದ್ದಾರೆ.
‘ಕಾಜಿ ಅವರು ಕೆಲವು ದಿನಗಳಿಂದ ಲುಕೇಮಿಯಾ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾದ ಅವರು ಬೆಳಿಗ್ಗೆ 5.30ಕ್ಕೆ ನಿಧನರಾದರು’ ಎಂದು ಕಾಜಿ ಅವರ ಕುಟುಂಬದ ಸದಸ್ಯರು ಹೇಳಿದರು.
ಕಲ್ಯಾಣಿ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.