ಖ್ಯಾತ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ (84) ಕೊಪ್ಪಳದಲ್ಲಿ ನಿಧನ ಹೊಂದಿದ್ದಾರೆ.

ರಂಗಭೂಮಿ ಕಲಾವಿದರಾಗಿ, ದೂರದರ್ಶನ ಮತ್ತು ಚಲನಚಿತ್ರ ನಟರಾಗಿ ಕಲ್ಮನಿ ಅವರು ಹೆಸರಾಗಿದ್ದರು. ರಂಗಭೂಮಿಯಲ್ಲಿ 77 ವರ್ಷ ಸೇವೆ ಸಲ್ಲಿಸಿದ ಹಿರಿಮೆ ಅವರದು.

1993ರಲ್ಲಿ ಕಲ್ಮನಿ ಅವರಿಗೆ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. 2021-22ನೇ ಸಾಲಿನ ‘ಗುಬ್ಬಿ ವೀರಣ್ಣ’ ಪ್ರಶಸ್ತಿ ಒಲಿದು ಬಂದಿತ್ತು, ಆದರೆ ಇನ್ನೂ ಪ್ರಧಾನ ಆಗಿಲ್ಲ. ವರದರಾಜ ಪ್ರಶಸ್ತಿ, ಬಳ್ಳಾರಿಯ ರಾಘವ ಕಲಾ ಬಳಗ ಕೊಡುವ ರಾಘವ ರಾಜ್ಯ ಪ್ರಶಸ್ತಿ ಹಾಗು ನಾಡಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು, ಅನ್ಯರಾಜ್ಯ ಸಂಸ್ಥೆಗಳು ಸನ್ಮಾನಿಸಿ ಬಾಬಣ್ಣ ಅವರನ್ನು ಗೌರವಿಸಿವೆ.

ಕಲ್ಮನಿ ಅವರು ತಮ್ಮ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಇಂದು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!