Tuesday, February 27, 2024

ವಕೀಲ ಈರಣ್ಣಾ ಗೌಡ ಪಾಟೀಲ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಪೊಲೀಸ್ ಬಲೆಗೆ

ಹೊಸದಿಗಂತ ವರದಿ ಕಲಬುರಗಿ:

ಇಲ್ಲಿನ ಸಾಯಿ ಮಂದಿರ ಬಳಿಯ ವಸತಿ ಸಮುಚ್ಛಯದ ಬಳಿ ಕೆಲ ದಿನಗಳ ಹಿಂದೆ ನಡೆದಿದ್ದ ವಕೀಲ ಈರಣ್ಣಾ ಗೌಡ ಪಾಟೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಅರೋಪಿಯನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನೀಲಕಂಠ ಪಾಟೀಲ್ ಎಂದು ಗುರುತಿಸಲಾಗಿದೆ.

ಈತ ಮಲ್ಲಿನಾಥ ನಾಯ್ಕೋಡಿ, ಭಾಗೇಶ, ಅವಣ್ಣ ಜೊತೆ ಸೇರಿ ಕೊಲೆಗೆ ಪ್ಲ್ಯಾನ್ ರೂಪಿಸಿದ್ದ. ನೀಲಕಂಠ ಪ್ಲ್ಯಾನ್ ನಂತೆ ವಕೀಲ ಈರಣ್ಣಾಗೌಡ ಪಾಟೀಲ್ ಅವರನ್ನು ಹತ್ಯೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ನೀಲಕಂಠ ಪಾಟೀಲ್ ಬಂಧನದೊಂದಿಗೆ ಬಂಧಿತರ‌ ಸಂಖ್ಯೆ ನಾಲ್ಕಕ್ಕೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!