Wednesday, October 5, 2022

Latest Posts

ಸ್ಕೈಡೈವಿಂಗ್ ವೇಳೆ ಪ್ಯಾರಾಚೂಟ್ ಅನ್ನು ನಿಧಾನವಾಗಿ ತೆರೆದ ಪ್ರಸಿದ್ಧ ಟಿಕ್‌ಟಾಕ್ ತಾರೆ ದುರಂತ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಸೋಷಿಯಲ್‌ ಮಿಡಿಯಾ ಪ್ಲಾಟ್‌ಫಾರ್ಮ್‌ ಟಿಕ್‌ ಟಾಕ್‌ ನಲ್ಲಿ 95 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಸಿದ್ಧ ತಾರೆ ತಾನ್ಯಾ ಪರ್ದಾಜಿ(21) ಸ್ಕೈ ಡೈವಿಂಗ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಕಾಶದಿಂದ ಜಿಗಿಯುವಾಗ ತಾನ್ಯಾ ಪ್ಯಾರಾಚೂಟ್​ ಅನ್ನು ತಡವಾಗಿ ತೆಗೆದಿದ್ದಾರೆ. ಈ ವೇಳೆ ನೆಲಕ್ಕೆ ಅಪ್ಪಳಿಸಿ ದುರಂತ ಸಾವು ಕಂಡಿದ್ದಾರೆ.
ದುರದೃಷ್ಟಕರ ಅಪಘಾತ ಸಂಭವಿಸಿದಾಗ ಇದು ತಾನ್ಯಾ ಅವರ ಮೊದಲ ಏಕವ್ಯಕ್ತಿ ಸ್ಕೈಡೈವಿಂಗ್ ಕೋರ್ಸ್ ಆಗಿತ್ತು. ಕೆನಡಾದ ಒಂಟಾರಿಯೊದಲ್ಲಿ ಈ ದುರಂತ ನಡೆದಿದೆ. ತಾನ್ಯಾ ಪ್ಯಾರಾಚ್ಯೂಟ್‌ ಅನ್ನು ನಿಧಾನವಾಗಿ ತೆರೆದಿದ್ದಾಳೆ. ಆದ್ದರಿಂದ ಪ್ಯಾರಾಚ್ಯೂಟ್‌ ಸರಿಯಾಗಿ ಬಿಚ್ಚಿಕೊಂಡಿಲ್ಲ. ಆಕೆಯಿದ್ದ ಪ್ಯಾರಾಚೂಟ್ 4,000 ಅಡಿಗಳಿಂದ ನೇರವಾಗಿ ನೆಲಕ್ಕೆ ಅಪ್ಪಿಳಿಸಿದೆ.
ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಆ ವೇಳೆಗೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

ತಾನ್ಯ ಬಹುಮುಖ ಪ್ರತಿಭೆಯಾಗಿದ್ದರು. ಸ್ಕಾರ್ಬರೋದ ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದಳು. ತನ್ನ ಕಾಲೇಜಿನ ಚೀರ್‌ಲೀಡಿಂಗ್ ತಂಡದ ಅವಿಭಾಜ್ಯ ಅಂಗವಾಗಿದ್ದಳು. ತಾನ್ಯಾ 2017 ರಲ್ಲಿಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯ ಸೆಮಿ-ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಅವಳು ಮನೋವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಳು. ಜೊತೆಗೆ ಕೆನಡಾದಲ್ಲಿ ವ್ಯಾಪಕವಾಗಿ ಜನಪ್ರಿಯವಾದ ಟಿಕ್‌ಟಾಕ್ ನಲ್ಲಿ ಸುಮಾರು 95 ಸಾವಿರ ಅನುಯಾಯಿಗಳನ್ನು ಮತ್ತು 2 ಮಿಲಿಯನ್ ಲೈಕ್‌ಗಳನ್ನು ಹೊಂದಿದ್ದಾಳೆ.
ಅಭಿಮಾನಿಗಳು ತಾನ್ಯಾ ಅಕಾಲಿಕ ಸಾವಿಗೆ ಶೋಕಿಸುತ್ತಿದ್ದಾರೆ. ಆಕೆಯ ಸ್ನೇಹಿತರು ʼಆಕೆ ಪ್ರತಿ ಸೆಕೆಂಡ್‌ ಅನ್ನೂ ಸಹ ಸಂಪೋರ್ಣವಾಗಿ ಆನಂದಿಸುತ್ತಾ ಬದುಕಿದ ವ್ಯಕ್ತಿ ಅವಳುʼ ಎಂದು ನೆನಪಿಸಿಕೊಳ್ಳುತ್ತಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!