ಉಕ್ಕಿ ಹರಿಯುತ್ತಿರುವ ಹಳ್ಳದಲ್ಲಿ ಸಿಲುಕಿದ ನಾಲ್ವರು: NDRF ತಂಡದಿಂದ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ವರದಿ, ಗದಗ
ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ತುಂಬಿ ಹರಿಯುತ್ತಿರುವ ತಾಲೂಕಿನ ಸಂದಿಗವಾಡ ಚಿಕ್ಕಮಣ್ಣೂರ ಹಳ್ಳದಲ್ಲಿ ನಾಲ್ವರು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ತಾಲೂಕಾಡಳಿತ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್.ಡಿ.ಆರ್.ಎಫ್) ತಂಡದ ಮೊರೆ ಹೊಗಿದೆ. ಇನ್ನು ಸೇತುವೆ ಕೊಚ್ಚಿ ಹೋದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಅದೇ ರೀತಿಯಾಗಿ ಗಜೇಂದ್ರಗಡ ತಾಲೂಕಿನ ಹಿರೇಅಳಗುಂಡಿ ಹಳ್ಳದಲ್ಲಿಯೂ ಜನರು ಸಿಲುಕಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಅವರನ್ನು ರಕ್ಷಿಸಲು ರೋಣ ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆ 4 ಗಂಟೆಯಿಂದ ಹರಸಾಹಸಪಡುತ್ತಿದ್ದಾರೆ.
ತಾಲೂಕಿನಲ್ಲಿ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಜನರು ಪರದಾಡುವಂತಾಗಿದೆ. ಅಲ್ಲದೆ ಬೆಳೆಗಳು ಸಂಪೂರ್ಣ ನೀರಲ್ಲಿ ಮುಳುಗಿ ಹೊಗಿದ್ದು ರೈತನ ಸಂಕಷ್ಟದ ಸ್ಥಿತಿಗೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!