ಫ್ಯಾನ್‌, ಎಸಿ ಬೇಕೇ ಬೇಕು: ವಿದ್ಯುತ್ ಬಳಕೆ ಗಣನೀಯ ಏರಿಕೆ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಹಿಂದೆಂದೂ ಕಂಡಿರದಂಥ ಬಿಸಿಲು ಎದುರಾಗಿದ್ದು, ಅರ್ಧ ಗಂಟೆ ಕರೆಂಟ್‌ ಹೋದರೂ ಜನರು ಮನೆಯಲ್ಲಿ ಇರಲು ಆಗುತ್ತಿಲ್ಲ. ಫ್ಯಾನ್‌ ಎಸಿಯಿಲ್ಲದೆ ದಿನಕಳೆಯುವುದು ಕಷ್ಟವಾಗಿದೆ.

ದಿನಕಳೆದಂತೆ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಇದರ ಜೊತೆಗೆ ವಿದ್ಯುತ್ ಬಳಕೆ ಗಣನೀಯವಾಗಿ ಏರಿಕೆಯಾಗಿದೆ.

ಏಪ್ರಿಲ್ 2023 ರಲ್ಲಿ, ಗರಿಷ್ಠ ವಿದ್ಯುತ್ ಬೇಡಿಕೆ 16,110 MW ಆಗಿತ್ತು. ಆದರೆ, ಈ ವರ್ಷ, ಏಪ್ರಿಲ್ 5 ರ ವೇಳೆಗೆ ಗರಿಷ್ಠ ಬೇಡಿಕೆ 16,985 MW ತಲುಪಿದೆ.

ಏಪ್ರಿಲ್ 2023 ರ ಗರಿಷ್ಠ ಲೋಡ್ ಮತ್ತು ಬಳಕೆಯು 7,800 MW ಆಗಿತ್ತು, 2024 ರ ಏಪ್ರಿಲ್‌ನಲ್ಲಿ 8,381 MW ಗೆ ಏರಿಕೆಯಾಗಿದೆ. ಅದು ಕೂಡ ಕೇವಲ BESCOM ವ್ಯಾಪ್ತಿಯಲ್ಲಿ ಮಾತ್ರ.

ಅದೇ ರೀತಿ, ಏಪ್ರಿಲ್ 2023 ರಲ್ಲಿ ಗರಿಷ್ಠ ಬಳಕೆಯು 4,137.9 MW ಆಗಿತ್ತು, 2024ರ ಏಪ್ರಿಲ್ ವೇಳೆಗೆ 4,402.26 MW ಗೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!