ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ಬಳಸಿಕೊಂಡು ನಡೆಯುತ್ತಿರುವ ಸುಳ್ಳು ಪ್ರಚಾರದ ವಿರುದ್ಧ ಕಠಿಣ ನಿಲುವು ತಾಳಿದ್ದಾರೆ. ಈ ಸಂಬಂಧ ಕೋಲ್ಕತ್ತಾ ಪೊಲೀಸರಿಗೆ ದೂರು ಸಲ್ಲಿಸಿರುವ ಅವರು, ತಪ್ಪು ಮಾಹಿತಿ ಹಬ್ಬಿಸುತ್ತಿರುವ ಫೇಸ್‌ಬುಕ್ ಪುಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಘನತೆಗೆ ಧಕ್ಕೆ ತರುತ್ತಿದೆ ಎಂದು ಆರೋಪ
‘ಸೌರವ್ ಗಂಗೂಲಿ ಫ್ಯಾನ್ಸ್’ ಹೆಸರಿನ ಪೇಜ್‌ನಲ್ಲಿ ಆಧಾರರಹಿತ ಮಾಹಿತಿ ಮತ್ತು ಅಪಪ್ರಚಾರ ನಡೆಯುತ್ತಿದ್ದು, ಇದು ತಮ್ಮ ವ್ಯಕ್ತಿತ್ವ ಮತ್ತು ಘನತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಗಂಗೂಲಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಟೀಕೆ ಸ್ವೀಕಾರ, ಸುಳ್ಳಿಗೆ ವಿರೋಧ
ಸಾರ್ವಜನಿಕ ಜೀವನದಲ್ಲಿ ಟೀಕೆ ಮತ್ತು ವಿರೋಧ ಸಹಜ. ಆದರೆ ಸುಳ್ಳು ಸುದ್ದಿಗಳನ್ನು ಹರಡಿ ವ್ಯಕ್ತಿಯ ಹೆಸರಿಗೆ ಮಸಿ ಬಳಿಯುವುದು ಒಪ್ಪಲಾಗದು ಎಂಬ ಸಂದೇಶವನ್ನು ಗಂಗೂಲಿ ನೀಡಿದ್ದಾರೆ. ಕಾನೂನಿನ ಮೂಲಕ ಇಂತಹ ಕೃತ್ಯಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜಕೀಯ ಊಹಾಪೋಹಗಳಿಗೂ ತೆರೆ
ಇತ್ತೀಚೆಗೆ ಗಂಗೂಲಿ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಹಲವು ಸುದ್ದಿಗಳು ಹರಿದಾಡಿದ್ದವು. ಆದರೆ ಈ ಎಲ್ಲ ಊಹಾಪೋಹಗಳಿಗೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಸದ್ಯ ಕ್ರಿಕೆಟ್ ಆಡಳಿತ ಮತ್ತು ಕ್ರೀಡಾ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದಾರೆ.



