ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಾಡಿನ ಹೆಮ್ಮೆಯ ನಟ ಪುನೀತ್ ರಾಜ್ಕುಮಾರ್ ಜನ್ಮದಿನ.
ಪುನೀತ್ ಅಗಲಿ ವರ್ಷಗಳೇ ಕಳೆದರೂ ಅಭಿಮಾನಿಗಳ ಹೃದಯದಲ್ಲಿ ಪುನೀತ್ ಇನ್ನೂ ಜೀವಂತ! ಎಲ್ಲಿ ಹೋದರೂ ಪುನೀತ್ ಅವರ ಫೋಟೊ ಜತೆ ಅಭಿಮಾನಿಗಳು ಹಾಜರಿರುತ್ತಾರೆ, ಇನ್ನು ಹೊಟೇಲ್ಗಳಲ್ಲಿ, ಟ್ಯಾಟೂಗಳಲ್ಲಿ ಪುನೀತ್ ಫೋಟೊ ರಾರಾಜಿಸುತ್ತಿದೆ.
ಮಧ್ಯರಾತ್ರಿ ಅಭಿಮಾನಿಗಳಿಗಾಗಿ ರಾಘವೇಂದ್ರ ರಾಜ್ಕುಮಾರ್ ಕೇಕ್ ಕತ್ತರಿಸಿ ತಮ್ಮನ ಜನ್ಮದಿನ ನೆರವೇರಿಸಿದ್ದಾರೆ. ಇನ್ನು ಪುನೀತ್ ಸಮಾಧಿಗೆ ಕುಟುಂಬದವರು ತೆರಳಿದ್ದು, ಪೂಜೆ ಮಾಡುತ್ತಿದ್ದಾರೆ. ಪುನೀತ್ ಸಮಾಧಿ ಮುಂದೆ ಫ್ಯಾನ್ಸ್ ಸಾಲುಗಟ್ಟಿ ನಿಂತಿದ್ದಾರೆ.