ದಾವಣಗೆರೆ ಬೆಣ್ಣೆ ದೋಸೆ ತಿನ್ನೋಕೆ ಬಂದ ರಮ್ಯಾ, ನಟಿ ನೋಡಲು ಫ್ಯಾನ್ಸ್ ಕ್ಯೂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್ ನಟಿ ರಮ್ಯಾ ದಾವಣಗೆರೆ ಬೆಣ್ಣೆ ದೋಸೆ ತಿನ್ನಲು ಗುರು ಕೊಟ್ಟೂರೇಶ್ವರ ಹೊಟೇಲ್‌ಗೆ ಬಂದಿದ್ದು, ನಟಿ ನೋಡಲು ಅಭಿಮಾನಿಗಳು ಹೊಟೇಲ್ ಮುಂದೆ ಸಾಲುಗಟ್ಟಿ ನಿಂತಿದ್ದರು.

ಹೆಡ್‌ಬುಷ್ ಸಿನಿಮಾದ ಪ್ರಿರಿಲೀಸ್ ಈವೆಂಟ್‌ಗಾಗಿ ರಮ್ಯಾ ದಾವಣಗೆರೆಗೆ ಬಂದಿದ್ದು, ಈ ವೇಳೆ ಹೊಟೇಲ್‌ನಲ್ಲಿ ದೋಸೆ ಸವಿಯಲು ಬಂದಿದ್ದಾರೆ. ನಟಿ ಬಂದಿದ್ದಾರೆ ಎಂಬ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿದ್ದು, ಹೊಟೇಲ್ ರಸ್ತೆ ಬಳಿ ಟ್ರಾಫಿಕ್ ಜಾಂ ಉಂಟಾಗಿದೆ.

ಈವೆಂಟ್‌ನಲ್ಲಿ ಅಭಿಮಾನಿಗಳು ದಾವಣಗೆರೆಯಲ್ಲಿ ಕೊಟ್ಟೂರೇಶ್ವರ ಹೊಟೇಲ್‌ನಲ್ಲಿ ಬೆಣ್ಣೆ ದೋಸೆ ತಿಂದು ಹೋಗಿ ಎಂದು ಹೇಳಿದ್ದು, ಅಭಿಮಾನಿಗಳ ಸಲಹೆಯಂತೆ ರಮ್ಯಾ ದೋಸೆ ಸವಿದಿದ್ದಾರೆ. ಅಭಿಮಾನಿಗಳ ಚಾಯ್ಸ್ ಯಾವಾಗಲೂ ಪರ್ಫೆಕ್ಟ್ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!