ಓ ಮೈ ಗಾಡ್ ಎಂಥ ಸಿನಿಮಾ… ನನ್ನನ್ನು ನನ್ನ ಊರಿಗೆ ಕರೆದೊಯ್ತು: ಕಾಂತಾರಕ್ಕೆ ಫಿದಾ ಆದ ಶಿಲ್ಪಾ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾಎಲ್ಲೆಡೆ ಅಬ್ಬರಿಸುತ್ತಿದೆ. ಪರಭಾಷೆಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹಿಂದಿಯಲ್ಲಿ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡುತ್ತಿದೆ.ಇದರ ನಡುವೆ ಸಿನಿಮಾ ಕಂಡ ಸಿನಿ ಸೆಲೆಬ್ರಿಟಿಗಳು ಸಹ ಕಾಂತಾರ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಇದೀಗ ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿ ಎಂಥ ಅದ್ಭುತವಾದ ಸಿನಿಮಾ ಎಂದು ಹೇಳಿದ್ದಾರೆ. ಸಿನಿಮಾ ನೋಡಿ ರೊಮಾಂಚನ ವಯಿತು ಎಂದು ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ.

‘ಕಾಂತಾರ ಚಿತ್ರಕ್ಕೆ ಮೆಚ್ಚುಗೆಯ ಪೋಸ್ಟ್. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದೆ. ಓ ಮೈ ಗಾಡ್ ಎಂಥ ಸಿನಿಮಾ. ಅದ್ಭುತವಾದ ನರೇಟಿವ್, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್‌ ನೋಡಿ ಗೂಸ್‌ಬಂಪ್ಸ್ ಬಂತು. ನಾನು ಸೇರಿದಂತೆ ವೀಕ್ಷಕನನ್ನು ಆ ಜಗತ್ತಿಗೆ ಕರೆದುಕೊಂಡು ಹೋಗುತ್ತೆ. ನಿಜವಾಗಿಯೂ ನನ್ನನ್ನು ನನ್ನ ಊರಿಗೆ ಕರೆದೊಯ್ತು ಇದು ಸಿನಿಮಾ ಶಕ್ತಿ. ಯಾವುದೇ ಪಕ್ಷಪಾತವಿಲ್ಲದೆ, ಕಥೆ ಹೇಳುವಿಕೆ, ಅಭಿನಯ, ನಂಬಿಕೆ ಮತ್ತು ಅದ್ಭುತ ನಿರ್ದೇಶನ. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಹುಮುಖ ಪ್ರತಿಭೆಗೆ ಹ್ಯಾಟ್ಸ್ ಆಫ್. ಸಕ್ಸಸ್ ಎಂಜಾಯ್ ಮಾಡಿ’ ಎಂದು ಹೇಳಿದ್ದಾರೆ.


ಕರ್ನಾಟಕ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶಿಲ್ಪಾ ಶೆಟ್ಟಿ ಬಳಿಕ ಬಾಲಿವುಡ್‌ಗೆ ಹಾರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!