ಹಳೆಯ ಸಂಸತ್‌ ಭವನಕ್ಕೆ ವಿದಾಯ: ಸೆಂಟ್ರಲ್‌ ಹಾಲ್‌ನಿಂದ ಹೊರನಡೆದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿಗೆ ಹಳೆಯ ಸಂಸತ್‌ ಭವನದೊಂದಿಗಿನ ನಂಟು ಕೊನೆಯಾಗಲಿದೆ. ಇನ್ಮುಂದೆ ನಡೆಯುವ ಪ್ರತಿಯೊಂದು ಅಧಿವೇಶನ, ಕಾರ್ಯಚಟುವಟಿಕೆಗಳೂ ನೂತನ ಭವನದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ವಿದಾಯ ಹೇಳಿದರು.

ಹಳೆಯ ಕಟ್ಟಡದ ಸೆಂಟ್ರಲ್‌ ಹಾಲ್‌ನಲ್ಲಿ ಕೊನೆಯ ಭಾಷಣ ಮಾಡುವ ಮೂಲಕ ವಿದಾಯ ಘೋಷಿಸಿದರು. ಸೆಂಟ್ರಲ್ ಹಾಲ್‌ನಿಂದ  ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಂಸದರು ಹೊರನಡೆದರು. ಹೊರಡುವ ಮುನ್ನ ತಮ್ಮ ಭಾಷಣದಲ್ಲಿ ಈ ಕಟ್ಟಡವನ್ನು ಇನ್ನು ಮುಂದೆ ‘ಸಂವಿಧಾನ ಸದನ್’ ಎಂದು ಕರೆಯುವಂತೆ ಪ್ರಧಾನಿ ಸಲಹೆ ನೀಡಿದರು.

ಪ್ರಧಾನಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಮತ್ತು ಇತರ ಸಂಸದರು ಹಳೆಯ ಸಂಸತ್ ಕಟ್ಟಡದಿಂದ ಹೊರಬಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!