ನಾಳೆ ಹಸೆಮಣೆ ಏರಲಿರುವ ಫರಾನ್ ಅಕ್ತರ್- ಶಿಬಾನಿ ದಾಂಡೇಕರ್, ಮದುವೆ ಶಾಸ್ತ್ರ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಫರಾನ್ ಅಕ್ತರ್ ಹಾಗೂ ಶಿಬಾನಿ ದಾಂಡೇಕರ್ ನಾಳೆ ಹಸೆಮಣೆ ಏರಲಿದ್ದು, ಮದುವೆ ಶಾಸ್ತ್ರಗಳು ಆರಂಭವಾಗಿವೆ.
ಬಹುಕಾಲದಿಂದ ಜೊತೆ ಇರುವ ಈ ಜೋಡಿ ಇತ್ತೀಚೆಗಷ್ಟೇ ಮದುವೆ ಅನೌನ್ಸ್‌ಮೆಂಟ್ ಮಾಡಿದ್ದರು. ಮುಂಬೈನ ಬಾಂದ್ರಾದಲ್ಲಿರುವ ಅಖ್ತರ್ ನಿವಾಸದಲ್ಲಿ ಸಂಜೆ ಸಂಗೀತ್ ಕಾರ್ಯಕ್ರಮ ಇದ್ದು, ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಫರಾನ್‌ಗೆ ಇದು ಎರಡನೇ ಮದುವೆ 2000ದಲ್ಲಿ ಅಧುನಾ ಭಬಾನಿ ಜೊತೆ ಫರಾನ್ ವಿವಾಹ ನೆರವೇರಿತ್ತು. ಅದಾದ ನಂತರ 2017ರಲ್ಲಿ ಫರಾನ್ ವಿಚ್ಛೇದನ ನೀಡಿದ್ದು, ವರ್ಷದ ನಂತರ ಶಿಬಾನಿ ಜೊತೆ ಡೇಟಿಂಗ್ ಆರಂಭಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!