Monday, July 4, 2022

Latest Posts

ಸಾಲಭಾದೆ: ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

ಹೊಸದಿಗಂತ ವರದಿ, ಹುಬ್ಬಳ್ಳಿ:

ರೈತನೋರ್ವ ಸಾಲಭಾದೆಯಿಂದ ಕಾಲುವೆಗೆ ಹಾರಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಮುಳಮುತ್ತಲದ ನಿವಾಸಿ ಈರಯ್ಯ ಬಸಲಿಂಗಯ್ಯ ಹಿರೇಮಠ (65) ಮೃತ ವ್ಯಕ್ತಿ.
ಇವರು ನವಲಗುಂದ ತಾಲೂಕಿನ ಬ್ಯಾಲಿಹಾಳದಲ್ಲಿ ನೆಲೆಸಿದರು. ಆದರೆ ಇತ್ತಿಚೆಗೆ ತಮ್ಮ ಜಮೀನಿನ ಮೇಲೆ 2 ಲಕ್ಷ ರೂ. ಬೆಳೆಸಾಲ ಮತ್ತು 1 ಲಕ್ಷ ರೂ ಕೈಗಡ ಸಾಲ ಮಾಡಿದ್ದರು. ತಮ್ಮ ಪತ್ನಿ ಅನಾರೋಗ್ಯಕ್ಕೆ ತುತ್ತಾದ ಕಾರಣ ಸಾಲ ಮರುಪಾವತಿ ಮಾಡುವ ಬಗ್ಗೆ ದಿಕ್ಕು ತೋಚದೆ ಮನನೊಂದು ಮಲಪ್ರಭಾ ಬಲದಂತೆ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಮೃತನ ಶವ ಬ್ಯಾಹಟ್ಟಿ ಗ್ರಾಮದ ಹದ್ದಿನ ಕಿನಾಲ್ ನೀರಿನಲ್ಲಿ ದೊರೆತಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿ.ಎಸ್.ಐ ಪ್ರಸಾದ್ ಘಣೇಕರ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ದೂರು ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss