ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯಾವ ಕಾನೂನನ್ನು ಫಾಲೋ ಮಾಡದೆ ಸೋನು ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಪೊಲೀಸರು ಮಗುವನ್ನು ಮಾತನಾಡಿಸಿದ್ದಾರೆ.
ನಾನು ಅಕ್ಕ ರೀಲ್ಸ್ ಮಾಡ್ತೀವಿ, ಅಕ್ಕ ನನ್ನನ್ನು ಚೆನ್ನಾಗಿ ನೋಡ್ಕೋತಾರೆ, ಒಳ್ಳೆ ಊಟ ಕೊಡಿಸ್ತಾರೆ, ಹೊಸ ಬಟ್ಟೆ ಕೊಡ್ಸಿದ್ರು ಎಂದು ಮಗು ಹೇಳಿದೆ. ಇದರ ಜೊತೆಗೆ ಊರಲ್ಲಿ ಅಪ್ಪ ಅಮ್ಮನಿಗೆ ನನ್ನನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸ್ತೇನೆ ಎಂದು ಸೋನು ಅಕ್ಕ ಹೇಳಿದ್ದರು. ಅದಕ್ಕೆ ನಾನು ಸಿಟಿಗೆ ಬಂದೆ. ಅಪ್ಪ ಅಮ್ಮನ ಜೊತೆ ಹೋಗ್ಬೇಕು ಅಂದ್ರೆ ವಾಪಾಸ್ ಹೋಗ್ತಿನಿ ಎಂದು ಮಗು ಹೇಳಿದೆ.