ಮಂಡ್ಯದಲ್ಲಿ ವಿದ್ಯುತ್ ತಂತಿ ತುಳಿದು ರೈತ ಸಾವು

ಹೊಸದಿಗಂತ ವರದಿ,ಮಂಡ್ಯ :

ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ರೈತನೋರ್ವ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಮೃತನಾದ ಪ್ರಕರಣ ಗುರುವಾರ ನಡೆದಿದೆ.

ಗ್ರಾಮದ ಚಿಕ್ಕವೀರಪ್ಪನವರ ಪುತ್ರರಾದ ರೈತ ನಿಂಗರಾಜಪ್ಪ(39) ಮೃತ ವ್ಯಕ್ತಿ. ತಾವು ಸಾಕಿಕೊಂಡಿರುವ ಜಾನುವಾರುಗಳಿಗೆ ಜಮೀನಿನಲ್ಲಿ ಮೇವಿನ ಹುಲ್ಲು ಬೆಳೆದಿದ್ದರು. ಎಂದಿನಂತೆ ಜಮೀನಿನಲ್ಲಿ ಮೇವಿನ ಕಡ್ಡಿಯನ್ನು ತರಲು ಜಮೀನಿಗೆ ಹೋಗಿದ್ದಾರೆ. ಕಡ್ಡಿ ಕಟಾವು ಮಾಡುವಾಗ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾರೆ. ತುಂಡಾದ ತಂತಿಯಲ್ಲಿದ್ದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ.

ಬಹಳ ಹೊತ್ತು ತಡವಾದರೂ ಮನೆಗೆ ಬಾರದಿರುವುದನ್ನು ಕಂಡು ಜಮೀನಿನಲ್ಲಿ ಅಕ್ಕಪಕ್ಕದವರನ್ನು ಕರೆದುಕೊಂಡು ಹುಡುಕಾಟ ನಡೆಸಿದ್ದಾರೆ. ತುಂಡಾದ ವಿದ್ಯುತ್ ತಂತಿ ಬಲಿ ಮೃತರಾಗಿರುವುದನ್ನು ಕಂಡಿದ್ದಾರೆ.

ವಿಷಯ ತಿಳಿದು ಕಿಕ್ಕೇರಿ ಇನ್‌ಸ್ಪೆಕ್ಟರ್ ರೇವತಿ, ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ಪಂಚಾನಾಮೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ನೀಡಲಾಯಿತು.

ವಿದ್ಯುತ್ ಅವಘಡ ಪ್ರಕರಣ ಹೋಬಳಿಯಲ್ಲಿ ಹೆಚ್ಚುತ್ತಿದೆ. ಸೆಸ್ಕಾಂ ಇಲಾಖೆಯವರು ನಿರ್ಲಕ್ಷವೇ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯವರು ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!