ಪ್ಯಾರಿಸ್ ಒಲಿಂಪಿಕ್ಸ್: ಭಾರತ ಅಥ್ಲೆಟಿಕ್ಸ್ ತಂಡಕ್ಕೆ ನೀರಜ್ ಚೋಪ್ರಾ ಸಾರಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

26ರಿಂದ ಪ್ಯಾರಿಸ್‌ನಲ್ಲಿ ಆರಂಭವಾಗಲಿರುವ ಒಲಿಂಪಿಕ್ ಕೂಟದಲ್ಲಿ ಭಾರತ ಅಥ್ಲೆಟಿಕ್ಸ್ ತಂಡವನ್ನು ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಅವರು ಮುನ್ನಡೆಸಲಿದ್ದಾರೆ.

ಈ ಬಾರಿಯ ಕೂಟದಲ್ಲಿ 28 ಆಟಗಾರರ ಭಾರತ ಅಥ್ಲೆಟಿಕ್ಸ್ ತಂಡವು ಸ್ಪರ್ಧಿಸಲಿದೆ.

ಈ ಬಳಗದಲ್ಲಿ 17 ಪುರುಷರು ಮತ್ತು 11 ಮಹಿಳಾ ಅಥ್ಲೀಟ್‌ಗಳು ಇದ್ದಾರೆ. ಏಷ್ಯನ್ ಗೇಮ್ಸ್ ಚಾಂಪಿಯನ್ ಅವಿನಾಶ್ ಸಬಳೆ, ತಜೀಂದರ್ ಪಾಲ್ ಸಿಂಗ್ ತೂರ್, ಹರ್ಡಲ್ಸ್‌ ಅಥ್ಲೀಟ್ ಜ್ಯೋತಿ ಯರಾಜಿ ಅವರೂ ತಂಡದಲ್ಲಿದ್ದಾರೆ. ಕರ್ನಾಟಕದ ಎಂ.ಆರ್. ಪೂವಮ್ಮ ಸ್ಥಾನ ಪಡೆದಿದ್ದಾರೆ.

ತಂಡಗಳು: ನೀರಜ್ ಚೋಪ್ರಾ, ಕಿಶೋರ್ ಜೇನಾ (ಜಾವೆಲಿನ್ ಥ್ರೋ), ಅವಿನಾಶ್ ಸಬ್ಳೆ (3000 ಮೀ, ಸ್ಟೀಪಲ್‌ಚೇಸ್), ತಜಿಂದರ್‌ ಪಾಲ್ ಸಿಂಗ್ ತೂರ್ (ಶಾಟ್‌ಪಟ್‌), ಪ್ರವೀಣ ಚಿತ್ರವೇಲ್, ಅಬುಲ್ಲಾ ಅಬೂಬಕ್ಕರ್ (ಟ್ರಿಪಲ್ ಜಂಪ್), ಅಕ್ಷದೀಪ್ ಸಿಂಗ್, ವಿಕಾಶ್ ಸಿಂಗ್, ಪರಮಜೀತ್ ಸಿಂಗ್ ಬಿಷ್ಠ್ (20 ಕಿ.ಮೀ. ರೇಸ್‌ವಾಕ್), ಮೊಹಮ್ಮದ್ ಅಜ್ಮಲ್, ಅಮೋಜ್ ಜೇಕಬ್, ಸಂತೋಷ್ ತಮಿಳರಸನ್, ರಾಜೇಶ್ ರಮೇಶ್ (4X400 ರಿಲೆ), ಮಿಜೊ ಚಾಕೊ ಕುರಿಯನ್ (4X400 ಮೀ ರಿಲೆ), ಸೂರಜ್ ಪನ್ವರ್ (ರೇಸ್‌ ವಾಕ್ ಮಿಶ್ರ ಮ್ಯಾರಥಾನ್), ಸರ್ವೇಶ್ ಅನಿಲ್ ಕುಶಾರೆ (ಹೈಜಂಪ್).

ಮಹಿಳೆಯರು: ಕಿರಣ್ ಪಹಲ್ (400ಮೀ), ಪಾರುಲ್ ಚೌಧರಿ (3000ಮೀ ಸ್ಟೀಪಲ್‌ಚೇಸ್ ಮತ್ತು 5000 ಮೀ), ಜ್ಯೋತಿ ಯರ್ರಾಜಿ (100 ಮೀ ಹರ್ಡಲ್ಸ್), ಅನುರಾಣಿ (ಜಾವೆಲಿನ್ ಥ್ರೋ), ಅಭಾ ಖತುವಾ (ಶಾಟ್‌ಪಟ್), ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿದ್ಯಾ ರಾಮರಾಜ್, ಎಂ.ಆರ್. ಪೂವಮ್ಮ (4X400 ಮೀ ರಿಲೆ), ಪ್ರಾಚಿ (4X400 ಮೀ), ಪ್ರಿಯಾಂಕಾ ಗೋಸ್ವಾಮಿ (20 ಕಿ.ಮೀ ರೇಸ್ ವಾಕ್, ಮಿಶ್ರ ಮ್ಯಾರಥಾನ್, ರೇಸ್‌ವಾಕ್).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!