ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಬೃಹತ್ ಪ್ರತಿಭಟನೆ ದೆಹಲಿ ಚಲೋಯಿಂದಾಗಿ ಹರಿಯಾಣ ಸರ್ಕಾರ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಹಾಗೂ ಬಲ್ಕ್ ಎಸ್‌ಎಂ ಎಸ್ ಸೇವೆಗಳನ್ನು ನಿಷೇಧಿಸಿದೆ.
ನಾಳೆಯವರೆಗೂ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಹಾಗೂ ಸಿರ್ಸಾ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಇರುವುದಿಲ್ಲ.
ರೈತರ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ತಮಿಳುನಾಡು ರೈತರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.