ಪುಲ್ವಾಮಾ ದಾಳಿಗೆ 5 ವರ್ಷ: ಹುತಾತ್ಮ ಯೋಧರಿಗೆ ನಮ್ಮದೊಂದು ಸಲಾಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆ. 14 ಬಂತು ಅಂದರೆ ಬಹಳಷ್ಟು ಜನ ಕೇವಲ ಇದು ಪ್ರೇಮಿಗಳ ದಿನ ಅನ್ನೋದನ್ನ ಮಾತ್ರ ನೆನಪಿಟ್ಟಿಕೊಳ್ಳುತ್ತಾರೆ. ಆದರೆ ಇದೆ ಐದು ವರ್ಷಕ್ಕಿಂತ ಮೊದಲು ಫೆ. 14 ಅಂದರೆ ಕರಾಳ ದಿನ, ಬ್ಲಾಕ್ ಡೇ ಎಂದು ಹೇಳುತ್ತಿದ್ದರು. ಇವತ್ತಿಗೂ ಎಷ್ಟೋ ಜನರಿಗೆ ಈ ದಿನ ಕೇವಲ ಪ್ರೇಮಿಗಳ ದಿನ ಎಂದೇ ಆಚರಿಸುತ್ತಾರೆ ಹೊರತು ನಮ್ಮ ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಬಿಟ್ಟ ವೀರ ಯೋಧರ ಹುತಾತ್ಮ ದಿನ ಎಂಬುದು ಕೆಲವರಿಗೆ ಅರಿವೇ ಇಲ್ಲ.

ಹೌದು, 2019 ಫೆ. 14 ಪುಲ್ವಾಮಾದ ಹೆದ್ದಾರಿ ಮೇಲೆ ಹರಿದ ವೀರ ಯೋಧರ ನೆತ್ತರು ಈ ಕಥೆಯನ್ನು ಪುನಃ ನಮಗೆ ನೆನಪಿಸುತ್ತದೆ. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆ ದಿನ ಅಕ್ಷರಶಃ ರಕ್ತದ ಒಡಲಿನಲ್ಲಿ ಮುಳುಗಿತ್ತು. ಉಗ್ರರು ನಡೆಸಿದ ದಾಳಿಗೆ ನಮ್ಮ ಭಾರತದ ಯೋಧರು ಪ್ರತಿ ದಾಳಿ ನಡೆಸಿ ಉತ್ತರವನ್ನು ಕೊಟ್ಟಿದ್ದರು. ಸ್ಫೋಟಕ ಸಾಧನಗಳನ್ನು (IED) ತುಂಬಿದ ಮಾರುತಿ ಇಕೊ ಕಾರನ್ನು ಸೇನೆಯ ವಾಹನಗಳಿಗೆ ಗುದ್ದಿಸಿದ್ದ ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯವರು ದಾಳಿಯನ್ನು ನಡೆಸಿದ್ದರು.

ಇದಕ್ಕೆ ಪ್ರತಿಯಾಗಿ ಪ್ರತಿದಾಳಿ ನಡೆಸಿದ ನಮ್ಮ ಯೋಧರು ಸರಿಸಮ ಪೈಪೋಟಿ ನೀಡಿ ವೀರ ಮರಣ ಹೊಂದಿದರು. ಆ ದಿನ ಪುಲ್ವಾಮಾದ ಹೆದ್ದಾರಿ ಮೇಲೆ ಹರಿದ ರಕ್ತ, ನಮ್ಮ ಯೋಧರ ಛಿದ್ರ ಛಿದ್ರವಾಗಿ ಬಿದ್ದ ದೇಹದ ಭಾಗಗಳು, ಸುಟ್ಟು ಕರಕಲಾದ ವಾಹನಗಳ ದೃಶ್ಯ ಇಂದಿಗೂ ಮನಸ್ಸಲ್ಲಿ ಅಚ್ಚಾಗಿ ಉಳಿದುಕೊಂಡಿದೆ.

ಅಂದಿನಿಂದ ಫೆ. 14 ರಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕಪ್ಪು ದಿನ ಅಥವಾ ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟ ಯೋಧರಿಗೆ ನಮನ ಸಲ್ಲಿಸುವ ದಿನ ಇದಾಗಿದ್ದು, ದೇಶಕ್ಕಾಗಿ ಬಲಿದಾನ ನೀಡಿದ ನಮ್ಮ ಹೆಮ್ಮೆಯ ಯೋಧರಿಗೆ ನಮ್ಮ ಸಲಾಂ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!