FASHION | ಮಾರುಕಟ್ಟೆಗೆ ಲಗ್ಗೆ ಇಟ್ಟ ಡಾಗ್‌ ಬರ್ತ್ ಡೇ ಆಕ್ಸೆಸರೀಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಮ್ಮ ಸಾಕುಪ್ರಾಣಿಗಳ ಹುಟ್ಟುಹಬ್ಬದ ಜೊತೆಯಲ್ಲಿ ವಿವಿಧ ಫ್ಯಾಶನ್ ಪರಿಕರಗಳು ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ನಾಯಿಯ ಹುಟ್ಟುಹಬ್ಬವನ್ನು ಆಚರಿಸುವುದು ವಾಡಿಕೆ. ಅವರನ್ನು ಮಕ್ಕಳಂತೆ ಪ್ರೀತಿಸುವ ಪಾಲಕರು ಆಗಾಗ್ಗೆ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ ಮತ್ತು ಥೀಮ್ ಮತ್ತು ಪರಿಕಲ್ಪನೆಗೆ ಅನುಗುಣವಾಗಿ ಅಲಂಕಾರಗಳನ್ನು ಮಾಡುವ ಮೂಲಕ ಆಚರಿಸುತ್ತಾರೆ.

What are birthday accessories?

ಸಾಕು ಪ್ರಾಣಿ ಶ್ವಾನಗಳು, ಇಂದು ಮನುಷ್ಯರ ಜೀವನದಲ್ಲಿ ತಮ್ಮದೇ ಆದ ಪಾತ್ರವಹಿಸುತ್ತಿವೆ. ಮನೆಯ ಮಕ್ಕಳಂತಾಗಿವೆ. ಮಕ್ಕಳಿಗೆ ಬರ್ತ್ ಡೇ ಸೆಲೆಬ್ರೇಟ್‌ ಮಾಡುವಂತೆ ಇವುಗಳ ಹುಟ್ಟುಹಬ್ಬವನ್ನು ಆಚರಿಸುವುದು ಕಂಡು ಬರುತ್ತಿದೆ. ಹಾಗಾಗಿ, ಈ ಶ್ವಾನಗಳನ್ನು ಸಿಂಗರಿಸುವ ಆಕ್ಸೆಸರೀಸ್‌ನಿಂದಿಡಿದು ಇವುಗಳು ಸವಿಯುವ ಕೇಕ್‌, ಬಿಸ್ಕಟ್‌ ಹಾಗೂ ಡೆಕೋರೇಟಿವ್‌ ಐಟಂಗಳನ್ನು ಖರೀದಿಸಿ ಸಿಂಗರಿಸುವುದು ಹೆಚ್ಚಾಗಿದೆ.

A selection of dog birthday accessories

ಬರ್ತ್ ಡೇ ಬಾಂದಾನಾ ಸೆಟ್‌, ಡಾಗ್‌ ಹ್ಯಾಪಿ ಬರ್ತ್ ಡೇ ಬ್ಯಾನರ್‌, ಬರ್ತ್ ಡೇ ಕೇಕ್‌ ಟಾಪರ್‌, ಬಂಟಿಂಗ್‌ ಡೆಕೋರೇಷನ್‌ ಐಟಂ, ಬರ್ತ್ ಡೇ ಪಾರ್ಟಿ ಥೀಮ್‌ ಸ್ವಿರ್ಲ್, ಕಟೌಟ್ಸ್, ಪಪ್‌ಟೇಲ್‌ ಡಾಗ್‌ ಸೂಟ್‌, ಡಾಗ್‌ ಬೋ ಟೈ, ರಾಯಲ್ ಬೋ, ಟೆಕ್ಸ್ಟ್ ಫಾಯಿಲ್‌ ಬಲೂನ್‌ ಸೆಟ್‌, ಪಪ್ಪಿ ಮಾಸ್ಕ್‌ಗಳು, ಫಂಕಿ ಪಾರ್ಟಿ ಬ್ಯಾನರ್‌, ಡಾಗ್‌ ಬೋನ್‌ ಫಾಯಿಲ್‌ ಬಲೂನ್ಸ್, ಡಾಗ್‌ ಥೀಮ್‌ ಬರ್ತ್ ಡೇ ಬಲೂನ್ಸ್, ಬರ್ತ್ ಡೇ ಬಾಯ್‌ ಸ್ಕಾರ್ಫ್, ಡಾಗ್‌ ಫ್ರೆಂಡ್ಲಿ ಪ್‌ ಕೇಕ್ಸ್, ಡಾಗ್ಗಿ ಐಸ್‌ಕ್ರೀಮ್ಸ್, ಡಾಗ್ಗಿ ಫೋಟೋ ಬೂತ್‌, ಡಾಗ್‌ ಟಾಯ್ಸ್, ಬೈಟ್‌ ಸೈಝ್‌ ಟ್ರೀಟ್ಸ್, ಕಾಲರ್‌ ಆಕ್ಸೆಸರೀಸ್‌ ಸೇರಿದಂತೆ ನಾನಾ ಬಗೆಯವು ಪೆಟ್‌ ಶಾಪ್‌ನಲ್ಲಿ ಮಾತ್ರವಲ್ಲ, ಆನ್‌ಲೈನ್‌ ಶಾಪ್‌ಗಳಲ್ಲೂ ಲಭ್ಯವಿದೆ. ಆಯಾ ಡಿಸೈನ್‌ಗೆ ತಕ್ಕಂತೆ ದರ ನಿಗಧಿಯಾಗಿರುತ್ತದೆ.

Birthday celebration for dogs too

ಡಾಗ್‌ ಬರ್ತ್ ಡೇ ಆಕ್ಸೆಸರೀಸ್‌ ಆಯ್ಕೆ:

ಹೆಚ್ಚಿನ ಟ್ರೆಂಡಿ ಪರಿಕರಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ.
ದೀರ್ಘಕಾಲ ಉಳಿಯುವಂತಹದನ್ನು ಖರೀದಿಸಿ.
ನಿಮ್ಮ ನಾಯಿ ಆನಂದಿಸುವಂತಹದನ್ನು ಆರಿಸಿ.
ಆರಾಮದಾಯಕ, ಫ್ಯಾಶನ್ ಉಡುಪುಗಳನ್ನು ಆರಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!