ಸಂಭ್ರಮ ಕಣ್ತುಂಬಿಕೊಳ್ಳಲು ಬರುವ ರಾಮಲಲಾ ಭಕ್ತರಿಗೆ ಘರಮಾ ಘರಮ್ ಚಾಯ್ ಫ್ರೀ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಲಲಾ ಪ್ರಾಣಪ್ರತಿಷ್ಠೆ ಸಂಭ್ರಮದಲ್ಲಿ ಜೊತೆಯಾಗಲು ಅಯೋಧ್ಯೆಗೆ ಬರುವ ಭಕ್ತಾದಿಗಳಿಗೆ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಉಚಿತವಾಗಿ ಬಿಸಿಬಿಸಿ ಚಹಾದ ವ್ಯವಸ್ಥೆ ಮಾಡಿ ಭೇಷ್ ಅನ್ನಿಸಿಕೊಂಡಿದ್ದಾರೆ!

ಈ ಬಗ್ಗೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಅಯೋಧ್ಯೆಗೆ ಅಯೋಧ್ಯೆಯೇ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದ್ದು, ಎಲ್ಲೆಲ್ಲೂ ಅಲಂಕಾರಗಳು ಕಣ್ಮನ ಸೂರೆಗೊಳಿಸುತ್ತಿವೆ. ಅಯೋಧ್ಯೆ ನಗರದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಇನ್ನಷ್ಟು ಸಿಂಗಾರಗೊಳಿಸಲಾಗುತ್ತಿದೆ.

ಜೊತೆಗೆ ಇಲ್ಲಿನ ಲತಾ ಮಂಗೇಶ್ಕರ್ ಚೌಕದ ಬಳಿ ಭಕ್ತರಿಗಾಗಿ ಸ್ಥಾಪಿಸಲಾದ ಸೆಲ್ಫಿ ಪಾಯಿಂಟ್‌ಗಳನ್ನು ಪ್ರತಿಮೆಗಳು, ಪೋಸ್ಟರ್, ಬ್ಯಾನರ್‌ಗಳಿಂದ ಅಲಂಕರಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!