August 24, 2026
Monday, August 24, 2026
spot_img

Fashion | ಟ್ರೆಂಡ್ ಆಗ್ತಿದೆ Septum nose rings! ಇದನ್ನ ಹಾಕೊಂಡ್ರೆ ದೇವತೆ ಥರ ಕಾಣ್ತಾರೆ ಹುಡುಗೀರು

ಇತ್ತೀಚಿನ ಫ್ಯಾಷನ್ ಲೋಕದಲ್ಲಿ ಮತ್ತೆ ಹಳೆ ಟ್ರೆಂಡ್‌ಗಳು ಹೊಸ ರೂಪದಲ್ಲಿ ಮರಳಿ ಬರ್ತಿವೆ. ಅವುಗಳಲ್ಲಿ ಈಗ ಎಲ್ಲರ ಗಮನ ಸೆಳೆದಿರುವುದು ‘ಸೆಪ್ಟಮ್ ನೋಸ್ ರಿಂಗ್’. ಒಂದು ಚಿಕ್ಕ ಆಭರಣವಾದರೂ, ಇದನ್ನು ಹಾಕ್ಕೊಂಡ್ರೆ ಹುಡುಗಿಯರ ಮುಖದ ಲುಕ್‌ ಸಂಪೂರ್ಣವಾಗಿ ಬದಲಾಗುತ್ತದೆ. ಸ್ಟೈಲಿಷ್, bold, ಕೆಲವೊಮ್ಮೆ ಮೃದುವಾದ ದೇವತೆ ಲುಕ್ ಕೊಡೋ ವಿಶೇಷತೆ ಇದಕ್ಕಿದೆ.

ಸೆಪ್ಟಮ್ ರಿಂಗ್‌ಗಳನ್ನು ಈಗ ಪಾಶ್ಚಾತ್ಯ ಫ್ಯಾಷನ್ ಮಾತ್ರವಲ್ಲ, ಸಾಂಪ್ರದಾಯಿಕ ಉಡುಗೆಯ ಜೊತೆಯೂ ಜೋಡಿಸಿ ಧರಿಸುತ್ತಿದ್ದಾರೆ. ಸೀರೆ, ಲೆಹಂಗಾ, ಇಂಡೋ-ವೆಸ್ಟರ್ನ್ ಡ್ರೆಸ್ ಜೊತೆ ಹಾಕ್ಕೊಂಡ್ರೆ ಮುಖದ ಆಕರ್ಷಣೆ ಇನ್ನಷ್ಟು ಹೆಚ್ಚುತ್ತದೆ. ವಿಶೇಷವಾಗಿ ಸಣ್ಣ, ಸರಳ ರಿಂಗ್‌ಗಳು ಮುಖಕ್ಕೆ ನೈಸರ್ಗಿಕ ಸೌಂದರ್ಯ ಕೊಡುತ್ತವೆ.

ಇದರಲ್ಲಿ ಹಲವು ಸ್ಟೈಲ್‌ಗಳು ಇವೆ ಸಣ್ಣ ಚೈನ್, ಸ್ಟೋನ್ ಸ್ಟೈಲ್, ಸಿಂಪಲ್ ಗೋಲ್ಡ್ ರಿಂಗ್‌ಗಳು. ಯಾವ ಸ್ಟೈಲ್ ಆಯ್ಕೆ ಮಾಡಿದರೂ, ಆತ್ಮವಿಶ್ವಾಸದ ಜೊತೆ ಧರಿಸಿದರೆ ಅದೇ ನಿಜವಾದ ಫ್ಯಾಷನ್ ಅನ್ನಿಸತ್ತೆ.

ಈ ಟ್ರೆಂಡ್‌ನ ವಿಶೇಷ ಅಂದ್ರೆ, ಇದು ಕೇವಲ ಆಭರಣ ಅಲ್ಲ. ಇದು ನಿಮ್ಮ ವ್ಯಕ್ತಿತ್ವವನ್ನೂ ತೋರಿಸುತ್ತದೆ. ಸ್ವಲ್ಪ ಸ್ಟೈಲ್, ಸ್ವಲ್ಪ ವಿಭಿನ್ನತೆ ಸೇರಿ ಸೆಪ್ಟಮ್ ನೋಸ್ ರಿಂಗ್ ಈಗ ಫ್ಯಾಷನ್ ಲೋಕದಲ್ಲಿ ದೊಡ್ಡ ಸ್ಟೇಟ್ಮೆಂಟ್ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !