Sunday, December 10, 2023

Latest Posts

ಕಾರ್ – ಟಾಟಾ ಐಎಸ್ ನಡುವೆ ಭೀಕರ ಅಪಘಾತ: ಇಬ್ಬರು ಸಾವು

ಹೊಸದಿಗಂತ ವರದಿ, ಬಾಗಲಕೋಟೆ:

ಕಾರ್ ಹಾಗೂ ಟಾಟಾ ಐಎಸ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಟಾಟಾ ಐಎಸ್ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಅಮೀನಗಡ ಸಮೀಪದ ರಕ್ಕಸಗಿ ಗ್ರಾಮದ ಸಮೀಪ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಮಂಗಳವಾರ ಮದ್ಯಾಹ್ನ ಹುನಗುಂದ ಮಾರ್ಗದಿಂದ ಹೊರಟಿದ್ದ ಟಾಟಾ ಐಎಸ್ ಹಾಗೂ ಅಮೀನಗಡ ಮಾರ್ಗದಿಂದ ಹೊಸಪೇಟೆಯೆಡೆಗೆ ಹೊರಟಿದ್ದ ಕ್ರೇಟಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡ ಕಾರ್ ಚಾಲಕ ಹಾಗೂ ಟಾಟಾ ಐಸ್ ನಲ್ಲಿದ್ದ ಉಳಿದವರನ್ನು ಹುನಗುಂದ ತಾಲ್ಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ತಾಂಡಾದ 18 ಕ್ಕೂ ಹೆಚ್ಚು ಜನರು ಟಾಟಾ ಐಸ್ ಮೂಲಕ ಶಿರೂರಿನ ನೀಲಾನಗರಕ್ಕೆ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ಅಮರನಾಥ ರೆಡ್ಡಿ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ,ಸಿಪಿಐ ಸುನೀಲ ಸವದಿ,ಅಮೀನಗಡ ಪಿಎಸ್ಐ ಶಿವಾನಂದ ಸಿಂಗನ್ನವರ ಭೇಟಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!