ಯಲ್ಲಾಪುರದಲ್ಲಿ ಭೀಕರ ಅಪಘಾತ, ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 10 ಜನರು ಸಾವುಕಂಡು 16 ಜನ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ.

ಹಾವೇರಿ ಸವಣೂರಿನಿಂದ ಕುಮಟಾದ ಕಡೆ ಹಣ್ಣು ತರಕಾರಿ ತುಂಬಿದ್ದ ಲಾರಿ ಗುಳ್ಳಾಪುರ ಭಾಗಕ್ಕೆ ಬರುತಿದ್ದಂತೆ ಚಾಲಕನ ನಿರ್ಲಕ್ಷದಿಂದ ವಿದ್ಯತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಸ್ಥಳದಲ್ಲೇ 9 ಜನರ ಸಾವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 16 ಜನ ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಹುಬ್ಬಳ್ಳಿ, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಶವಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಗಾಯಗೊಂಡವರು ಹಾಗೂ ಮೃತರಾದವರು ಹಾವೇರಿಯ ಸವಣೂರು ಮೂಲದವರಾಗಿದ್ದು, ಕುಮಟಾದಲ್ಲಿ ನಡೆಯುವ ಸಂತೆಗೆ ಹಣ್ಣು ತರಕಾರಿ ಒಯ್ಯುತ್ತಿದ್ದರು. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!