ದಿಗಂತ ವರದಿ ವಿಜಯಪುರ:
ಕ್ಷುಲ್ಲಕ ಕಾರಣಕ್ಕಾಗಿ ಮಹಾನಗರ ಪಾಲಿಕೆ ಮೇಯರ್ ಮೆಹೇಜಬಿನ್ ಹೊರ್ತಿ ಹಾಗೂ ಅವರ ಪತಿ, ಪುತ್ರರಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಬಾಗವಾನ ಗಲ್ಲಿಯಲ್ಲಿ ನಡೆದಿದೆ.
ಪಾರಿವಾಳದ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿನ ನಿವಾಸಿ ಯಾಸ್ಮೀನ್ ಎಂಬವರ ಮತ್ತು ಅವರ ಪುತ್ರ ಹಾಗೂ ಇನ್ನೊಬ್ಬ ಮಹಿಳೆ ಸೇರಿದಂತೆ ಮೂವರ ಮೇಲೆ, ಪಾಲಿಕೆ ಮೇಯರ್ ಮೆಹೇಜಬಿನ್ ಹೊರ್ತಿ, ಅವರ ಪತಿ ಅಬ್ದುಲ್ ರಜಾಕ್ ಹೊರ್ತಿ, ಮಕ್ಕಳು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಾಳುಗಳು ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತಮಗೆ ನ್ಯಾಯಬೇಕು, ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲ್ಲೆಗೊಳಗಾದ ಮಹಿಳೆ ಯಾಸ್ಮೀನ್ ಒತ್ತಾಯಿಸಿದ್ದಾರೆ.
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.