October 11, 2026
Sunday, October 11, 2026
spot_img

ಕಾಲು ಜಾರಿ ಬಿದ್ದ ಅಳಿಯನನ್ನು ಕಾಪಾಡಲು ಹೋದ ಮಾವನೂ ನೀರಿನಲ್ಲಿ ಮುಳುಗಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಲು ಜಾರಿ ನೀರಿಗೆ ಬಿದ್ದ ಅಳಿಯನನ್ನು ರಕ್ಷಿಸಲು ಹೋದ ಮಾವನೂ ನೀರುಪಾಲಾಗಿರುವ ಘಟನೆ ಹಾಸನದ ಅರಸೀಕೆರೆಯ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರಭಾಕರ ಹಾಗೂ ಹನ್ನೆರಡು ವರ್ಷದ ಪ್ರತೀಕ್‌ ಮೃತರು. ಸೋಮನಹಳ್ಳಿಯ ಪ್ರತೀಕ ಬೇಸಿಗೆ ರಜೆ ಎಂದು ಮಾನವ ಮನೆಗೆ ಬಂದಿದ್ದ. ಕೆರೆ ಏರಿ ಬಳಿ ನಡೆದುಕೊಂಡು ಹೋಗುವಾಗ ಕಾಲು ಜಾರಿ ಪ್ರತೀಕ್‌ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಪ್ರಭಾಕರ್‌ ಹಾರಿದ್ದು ಅವರೂ ಮೃತಪಟ್ಟಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿ ಎರಡೂ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಮೃತದೇಹಗಳನ್ನು ಕಂಡು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

Must Read