ಹೊಸದಿಗಂತ ಡಿಜಿಟಲ್ ಡೆಸ್ಕ್ :
ತಾಯಿ ಸಾವಿನ ಬಳಿಕ ಅಜ್ಜಿಯ ಮನೆಯಲ್ಲಿದ್ದ ಎಂಟು ವರ್ಷದ ಮಗು ತನ್ನ ಜೊತೆ ಬರಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ತಂದೆಯೇ ಮಗನನ್ನು ಕೊಲೆ ಮಾಡಿರುವ ಅಮಾನುಷ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.
ಎಂಟು ವರ್ಷದ ಬಾಲಕ ಭುವನ್ ತೇಜ್ ಅಪ್ಪನ ಕೈಯಿಂದಲೇ ಕೊಲೆಯಾದ
ಮೃತ ದುರ್ದೈವಿ. ತಂದೆ ಬಾಲಸುಬ್ರಹ್ಮಣ್ಯಂ ಎಂಬಾತನೇ ಕೊಲೆಗೈದ ಆರೋಪಿ.
ಅಜ್ಜಿ ಮನೆಯಲ್ಲೇ ಉಳಿದಿದ್ದ ಮಗನನ್ನು ಮನೆಗೆ ಕರೆದೊಯ್ಯಲು ಬಾಲಸುಬ್ರಹ್ಮಣ್ಯಂ ಪ್ರಯತ್ನಿಸಿದ್ದಾನೆ. ಆದರೆ ಅದಕ್ಕೆ ಭುವನ್ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ತಂದೆ ಮಗನಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಕೂಡ
ಪ್ರಾಣ ಉಳಿಯಲಿಲ್ಲ.
ಘಟನಾ ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನಂಗಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.