ರಿಲಯನ್ಸ್‌ ರೀಟೇಲ್‌ ಮುಖ್ಯಸ್ಥೆಯಾಗಿ ಇಶಾ ಅಂಬಾನಿಯನ್ನು ಪರಿಚಯಿಸಿದ ತಂದೆ ಮುಖೇಶ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ ಕಂಪನಿಯ ಮುಖ್ಯಸ್ಥೆಯನ್ನಾಗಿ ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಸೋಮವಾರ ಪರಿಚಯಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ಎಜಿಎಂ (ವಾರ್ಷಿಕ ಸಾಮಾನ್ಯ ಸಭೆ) ನಲ್ಲಿ ಮಾತನಾಡಿದ ಮುಖೇಶ್‌ ಅಂಬಾನಿ , ಈ ನೇಮಕವನ್ನು ಖಚಿತಪಡಿಸಿದ್ದಾರೆ. ಜೂನ್‌ನಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಟೆಲಿಕಾಂ ಘಟಕದ ಮುಖ್ಯಸ್ಥರಾಗಿ ಆಕಾಶ್‌ ಅಂಬಾನಿ ಅವರ ನೇಮಕದ ಬಳಿಕ ಈಗ ಪುತ್ರಿ ಇಶಾ ಅಂಬಾನಿಯನ್ನು ರಿಲಯನ್ಸ್ ರೀಟೇಲ್‌ ನಾಯಕಿಯಾಗಿ ಪರಿಚಯಿಸಲಾಗಿದೆ.

ಇನ್ನು, ರಿಲಯನ್ಸ್‌ ರೀಟೇಲ್‌ ಮುಖ್ಯಸ್ಥೆಯಾಗಿ ಪರಿಚಯಿಸಲ್ಪಟ್ಟ ನಂತರ ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಇಶಾ ಅಂಬಾನಿ, ರಿಲಯನ್ಸ್ ರಿಟೇಲ್ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ವ್ಯವಹಾರವನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದರು. ಹಾಗೂ, ಈ ಸಭೆಯಲ್ಲಿ 30ರ ಹರೆಯದ ಇಶಾ, ವಾಟ್ಸಾಪ್ ಬಳಸಿ ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್‌ಗಳನ್ನು ನೀಡುವುದು ಮತ್ತು ಪಾವತಿ ಮಾಡುವ ಕುರಿತು ಪ್ರಸ್ತುತಿಯನ್ನು ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!