ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ ಕಾಲದಲ್ಲೂ ಮನೆಯ ಸಂಜೆ ನಂತರ ಹೆಣ್ಣುಮಕ್ಕಳನ್ನು ಹೊರಗೆ ಕಳಿಸೋದಕ್ಕೆ ಪೋಷಕರು ಹಿಂದು ಮುಂದೆ ನೋಡ್ತಾರೆ, ಮನೆಯೇ ಹೆಣ್ಣುಮಕ್ಕಳಿಗೆ ಮೊದಲ ಸುರಕ್ಷಿತ ಸ್ಥಳ ಎಂದುಕೊಳ್ತಾರೆ. ಆದರೆ ಮನೆಯಲ್ಲಿಯೂ ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲವಾದರೆ?
ಬೀದರ್ನ ಬಸವಕಲ್ಯಾಣದಲ್ಲಿ ತಂದೆಯೇ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ. ಮನೆಯಲ್ಲಿ ಎಲ್ಲರೂ ನಿದ್ದೆಯಲ್ಲಿ ಇದ್ದಾಗ ಮಗಳ ಕೋಣೆಗೆ ತಂದೆ ಹೋಗಿದ್ದು, ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯವನ್ನು ಬಾಲಕಿಯ ಅಜ್ಜಿಯೇ ನೋಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಒಂದು ವರ್ಷದಿಂದಲೂ ತಂದೆಯೇ ಅತ್ಯಾಚಾರ ಎಸಗುತ್ತಿದ್ದು, ಯಾರಿಗೇ ವಿಷಯ ಹೇಳಿದರೂ ಕೊಲೆ ಮಾಡುವುದಾಗಿ ತಂದೆ ಹೆದರಿಸಿದ್ದರು. ಇದೀಗ ಠಾಣೆಯಲ್ಲಿ ದೂರು ದಾಖಲಾಗಿದೆ.,