Sunday, March 26, 2023

Latest Posts

ಮಗಳನ್ನು ತಪ್ಪು ಪರೀಕ್ಷಾ ಕೇಂದ್ರದಲ್ಲಿ ಬಿಟ್ಟ ತಂದೆ: ನೆರವಿಗೆ ಬಂದ ಪೊಲೀಸ್ ಇನ್ಸ್‌ಪೆಕ್ಟರ್ ಮಾಡಿದ್ದು ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌
 
ಪರೀಕ್ಷೆ ಅಂದಾಗ ಟೆನ್ಸಶನ್, ಬ್ಯುಸಿ ಇದ್ದೆ ಇರುತ್ತೆ. ಅದು ವಿದ್ಯಾರ್ಥಿಗಳ ಜೊತೆಗೆ ಪೋಷಕರಿಗೂ ಕೂಡ ಸಹಜ. ಈ ಎಲ್ಲದರ ನಡುವೆ ಪೋಷಕರು ಮಗಳನ್ನು ಪರೀಕ್ಷೆ ಕೇಂದ್ರಕ್ಕೆ ಬಿಡಲು ತೆರಳಿದಾಗ ಸಮಸ್ಯೆ ಒಂದು ಎದುರಾಗಿದೆ.

ಹೌದು,ಗುಜರಾತ್ ಅಹಮದಾಬಾದ್​ನಲ್ಲಿ (Ahmedabad) ತಂದೆಯೊಬ್ಬ ಮಗಳನ್ನು ತಪ್ಪು ಪರೀಕ್ಷಾ ಕೇಂದ್ರಕ್ಕೆ (Exam centre) ಕರೆದುಕೊಂಡು ಬಂದಿದ್ದಾನೆ. ಒತ್ತಡದಲ್ಲಿದ್ದ ತಂದೆ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ . ಮಗಳು 15 ನಿಮಿಷಗಳ ಕಾಲ ಅವಳ ರೋಲ್ ನಂಬರ್ ಹುಡುಕಲು ಪ್ರಯತ್ನಿಸಿದಳು, ನಂತರ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಬಹಳ ಸಮಯದಿಂದ ಈಕೆ ಅಸಮಾಧಾನಗೊಂಡಿದ್ದನ್ನು ನೋಡಿದ ನಂತರ ಆಕೆಯ ಹಾಲ್ ಟಿಕೆಟ್ ತೆಗೆದುಕೊಂಡು ನೋಡಿದ್ದರೆ .ಹುಡುಗಿಯ ತಂದೆ ಅವಳನ್ನು ತಪ್ಪು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದ್ದಾರೆ, ಹುಡುಗಿಯ ನಿಜವಾದ ಪರೀಕ್ಷಾ ಕೇಂದ್ರವು ಅಲ್ಲಿಂದ 20 ಕಿಮೀ ದೂರದಲ್ಲಿದೆ ಅನ್ನೋದು ಅವರಿಗೆ ಗೊತ್ತಾಗತ್ತೆ.

ಬಳಿಕ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಅಧಿಕೃತ ಕಾರಿನಲ್ಲಿ ಲೈಟ್ ಆನ್ ಮಾಡಿ ಸೈರನ್ ಕೂಡಾ ಹಾಕಿ ಹುಡುಗಿಯನ್ನು ಸಮಯಕ್ಕಿಂತ ಮುಂಚಿತವಾಗಿ ಆಕೆಯ ಮೂಲ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಮೂಲಕ ಆಕೆಯ ಒಂದು ವರ್ಷ ಹಾಳಾಗದಂತೆ ರಕ್ಷಿಸಿದರು.
ಇದೀಗ ಈ ಘಟನೆ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಎಲ್ಲರು ಪೋಲೀಸರ ಕರ್ತವ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!