ಮೂರು ತಿಂಗಳ ಹಿಂದೆ ತಂದೆಯ ಮೇಲೆ ಹಲ್ಲೆ ನಡೆಸಿ ಠಾಣೆಗೆ ಹೋಗಿದ್ದ ಫಯಾಜ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾರ್ಪೋರೇಟರ್‌ ನಿರಂಜನ್‌ ಹಿರೇಮಠ ಮಗಳು ನೇಹಾ ಹಿರೇಮಠ ಹತ್ಯೆ ವಿಚಾರ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.

ಕೊಲೆ ಆರೋಪಿ ಫಯಾಜ್‌ ಬಗ್ಗೆ ಮತ್ತೊಂದು ಮಾಹಿತಿ ಲಭ್ಯವಾಗಿದೆ. ಫಯಾಜ್‌ ನೇಹಾಳನ್ನು ಕೊಲೆ ಮಾಡುವ ಮುನ್ನ ತಮ್ಮ ತಂದೆ ಬಾಬಾ ಸಾಹೇಬ್‌ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ಸ್ವತಃ ಫಯಾಜ್‌ ತಂದೆ ಠಾಣೆಗೆ ತೆರಳಿ ಮಗನ ವಿರುದ್ಧ ದೂರು ನೀಡಿ ಅವನಿಂದ ನನಗೆ ರಕ್ಷಣೆ ಬೇಕು ಎಂದು ಹೇಳಿದ್ದರು ಎನ್ನಲಾಗಿದೆ. ಫಯಾಜ್‌ನನ್ನು ಪೊಲೀಸರು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

ಆಸ್ತಿ ವಿಚಾರವಾಗಿ ತಾಯಿ ಪರವಾಗಿ ನಿಂತಿದ್ದ ಫಯಾಜ್‌ ತಂದೆಯ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!