ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿಎಫ್ ನಂತರ ರಾಕಿಂಗ್ ಸ್ಟಾರ್ ಲಕ್ ಬದಲಾಗಿದೆ. ಯಶ್ಗೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಯಶ್ ತೂಗಿ ಅಳೆದು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ರಾಮಾಯಣ ಸಿನಿಮಾದಲ್ಲಿ ಯಶ್ಗೆ ನಟಿಸೋಕೆ ಆಫರ್ ಬಂದಿದ್ದನ್ನು ಅವರು ರಿಜೆಕ್ಟ್ ಮಾಡಿದ್ದರು. ಇದೀಗ ಬಾಲಿವುಡ್ ಕಡೆಯಿಂದ ಮತ್ತೊಂದು ಬಿಗ್ ಆಫರ್ ಬಂದಿದೆ.
1993ರಲ್ಲಿ ಸಂಜಯ್ ದತ್ ನಟನೆಯ ಖಳ್ ನಾಯಕ್ ಬಿಗ್ ಹಿಟ್ ಆಗಿತ್ತು. ಇದೀಗ 31 ವರ್ಷದ ಬಳಿಕ ಖಳ್ ನಾಯಕ್ ಸೀಕ್ವೆಲ್ಗೆ ಪ್ಲಾನ್ ನಡೀತಿದೆ. ಈ ಸಿನಿಮಾಗೆ ನಾಯಕ ಯಾರು? ಅನ್ನೋ ಆಯ್ಕೆಯಲ್ಲಿ ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು ಮೊದಲ ಸಾಲಿನಲ್ಲಿದೆ. ಖಳ್ ನಾಯಕ್ ಸೀಕ್ವೆಲ್ನಲ್ಲಿ ಅಭಿನಯಿಸಲು ಯಶ್ಗೆ ಭಾರೀ ಬೇಡಿಕೆ ಇದೆ ಎನ್ನಲಾಗಿದೆ.