June 27, 2026
Saturday, June 27, 2026
spot_img

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ: ಇರಾನ್ ಬಂದರು ನಗರದಲ್ಲಿ ಸರಣಿ ಸ್ಫೋಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ಪಡೆಗಳು ನಡೆಸಿದ ದಾಳಿಗೆ ಪ್ರತಿಯಾಗಿ, ಅಮೆರಿಕ ಸೇನೆ ಈಗ ಪ್ರಬಲ ತಿರುಗೇಟು ನೀಡಿದೆ. ಇರಾನಿನ ಕ್ಷಿಪಣಿ, ಡ್ರೋನ್‌ ಸಂಗ್ರಹಣಾ ಕೇಂದ್ರಗಳು ಹಾಗೂ ಕರಾವಳಿ ರಾಡಾರ್‌ ನೆಲೆಗಳನ್ನು ಗುರಿಯಾಗಿಸಿಕೊಂಡು ಯುಎಸ್ ಸೆಂಟ್ರಲ್ ಕಮಾಂಡ್ ಭೀಕರ ದಾಳಿ ನಡೆಸಿದೆ.

ಕದನ ವಿರಾಮ ಉಲ್ಲಂಘಿಸಿದ ಇರಾನ್

ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ವಾಣಿಜ್ಯ ಸಾಗಣೆಯ ವಿರುದ್ಧ ಇರಾನ್ ಅನಗತ್ಯ ಆಕ್ರಮಣಕಾರಿ ಧೋರಣೆ ತಳೆದಿದೆ. ಇದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮವಾಗಿ ದಾಳಿ ನಡೆಸಲಾಗಿದೆ ಎಂದು ಯುಎಸ್ ಸೇನೆ ಸ್ಪಷ್ಟಪಡಿಸಿದೆ.

ಬಂದರು ನಗರದಲ್ಲಿ ಸರಣಿ ಸ್ಫೋಟದ ಸದ್ದು

ಅಮೆರಿಕದ ಈ ದಿಢೀರ್ ಕಾರ್ಯಾಚರಣೆಯಿಂದಾಗಿ ಇರಾನ್‌ನ ದಕ್ಷಿಣ ಬಂದರು ನಗರವಾದ ‘ತಹೆರೋಯೆ ಪಿಯರ್’ನಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ಇರಾನ್ ರಾಜ್ಯ ದೂರದರ್ಶನ ವರದಿ ಮಾಡಿದೆ. ಈ ದಾಳಿಯು ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !